FLASH NEWS
Saturday, 16 September 2023
ಅಧ್ಯಾಪಕರ ಸಂಘದ ವತಿಯಿಂದ ಎಸ್. ವಿ. ಭಟ್ ರವರಿಗೆ ನುಡಿ ನಮನ:
Saturday, 17 June 2023
ಪಿ. ಎಸ್. ಸಿ ಪ್ರಶ್ನೆ ಪತ್ರಿಕೆ ಗೊಂದಲ; ಪರೀಕ್ಷಾರ್ಥಿಗಳ ಜೊತೆ ಸಭೆ :
Friday, 26 May 2023
ತಿರುವನಂತಪುರದ ವಿವಿಧ ಇಲಾಖೆಗೆ ಕನ್ನಡ ಅಧ್ಯಾಪಕರ ಸಂಘದ ನಿಯೋಗ ಭೇಟಿ:
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಸಂಘಟನೆಯ ನಿಯೋಗವು ತಿರುವನಂತಪುರದ ವಿವಿಧ ಇಲಾಖೆಗೆ ಭೇಟಿ ನೀಡಿ ಮನವಿ ಸಲ್ಲಿಸಿತು.
Saturday, 13 May 2023
ವಿದಾಯ ಕೂಟ ಸಮಾರಂಭ:
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ 2022-23 ನೇ ಸಾಲಿನಲ್ಲಿ ನಿವೃತ್ತರಾಗುವ ಕನ್ನಡ ಮಾಧ್ಯಮ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ, ಅಧ್ಯಾಪಿಕೆಯರಿಗೆ ವಿದಾಯ ಕೂಟ ಸಮಾರಂಭವು ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.
Friday, 21 April 2023
ಕೊಡುಗೈ ದಾನಿ ಶ್ರೀ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನರವರಿಗೆ ಸಂಘಟನೆಯ ವತಿಯಿಂದ ಗೌರವಾರ್ಪಣೆ :
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ರಜತ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆ ಮಾಡಿದ ಹೇರಂಬ ಇಂಡಸ್ಟ್ರೀಸ್ ಮುಂಬೈ ಇದರ ಸ್ಥಾಪಕಾಧ್ಯಕ್ಷರಾದ ಶ್ರೀಯುತ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನಕವರು ಅನಿವಾರ್ಯ ಕಾರಣಗಳಿಂದ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಬರಲು ಅನಾನುಕೂಲವಾಯಿತು. ಆದರೂ ಕನ್ನಡ ಅಧ್ಯಾಪಕರ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಅಭಿನಂದಿಸಿ, ರಜತ ಮಹೋತ್ಸವಕ್ಕೆ ಶುಭವನ್ನೂ ಹಾರೈಸಿರುವರು. ಜೊತೆಗೆ ರಜತ ಮಹೋತ್ಸವದ ಖರ್ಚಿಗಾಗಿ ಒಂದು ಲಕ್ಷ ರೂ. ಸಹಾಯಧನವನ್ನು ಕೊಡುಗೆಯಾಗಿ ನೀಡಿರುವರು.
Saturday, 25 March 2023
ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ರಜತ ಮಹೋತ್ಸವ:
'ಕನ್ನಡ ಕೊರಳಿನ ಕರೆಯಾಗದೆ, ಕರುಳಿನ ಕರೆಯಾದಾಗ ಮಾತ್ರ ಭಾಷೆ ಭಾಸವಾಗುತ್ತದೆ, ಭಾಷೆ ಬಾಳಾಗುತ್ತದೆ' ಎಂದು ಖ್ಯಾತ ಚಿಂತಕರು, ವಿಮರ್ಶಕರೂ ಆಗಿರುವ ಅರವಿಂದ ಚೊಕ್ಕಾಡಿ ಯವರು ಹೇಳಿದರು.
Friday, 24 February 2023
ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ರಾಜ್ಯ ಸಮ್ಮೇಳನ
ಮಾತೃ ಭಾಷೆಯ ಕಲಿಕೆಯೊಂದಿಗೆ ವಿದ್ಯಾ ರ್ಥಿಗಳನ್ನು ಪತ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಬೇಕೆಂದು ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಸಿ.ಕೆ. ವಾಸು ಹೇಳಿದರು.
ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ರಾಜ್ಯ ಸಮ್ಮೇಳನವನ್ನು ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಮಾತೃ ಭಾಷೆಯಲ್ಲಿ ಮಾತ್ರವೇ ಸರಿಯಾದ ರೀತಿಯಲ್ಲಿ ಆಶಯ ವಿನಿಮಯ ಮಾಡಿಕೊಳ್ಳಲು ಸಾಧ್ಯ ಎಂದ ಅವರು ಯಾವುದೇ ವಿಷಯವಾಗಿರಲಿ ವಿದ್ಯಾರ್ಥಿಗಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಪ್ರಾಧ್ಯಾಪಕರು ಹೆಚ್ಚಿನ ಗಮನ ಹರಿಸಬೇಕು. ಕಲಿಕೆ ಎಂದರೆ ಸಿಲಬೆಸ್ ಮಾತ್ರವಲ್ಲ ಪತ್ಯೇತರ ವಿಷಯಗಳಲ್ಲೂ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ. ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಅಂಕಣಗಾರರು, ಪ್ರಗತಿಪರ ಚಿಂತಕರು ಆಗಿರುವ ಡಾ. ನರೇಂದ್ರ ರೈ ದೇರ್ಲ ಮಾತನಾಡಿ, ಕಾಸರಗೋಡಿನಲ್ಲಿ ಅಧ್ಯಾಪಕರು ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಬಿ.ಮಹಾಲಿಂಗೇಶ್ವರ ರಾಜ್, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಶುಭ ಭಕೋರಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿದರು. ಸಂಘದ ಅಧಿಕೃತ ವಕ್ತಾರ ಶ್ರೀ ರವೀಂದ್ರನಾಥ್ ಕೆ.ಆರ್. ಪ್ರಾಸ್ತಾವಿಕ ನುಡಿದರು. ಸಂಘದ ಕೋಶಾಧಿಕಾರಿ ಪದ್ಮಾವತಿ ಎಂ. ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಶರತ್ ಕುಮಾರ್ ಎಂ. ರವರು ವಂದಿಸಿದರು.
ಕಾಸರಗೋಡಿನಲ್ಲಿ ಉದ್ಘಾಟನೆಗೂ ಮುನ್ನ ಬೀರಂತಬೈಲಿನ ಕನ್ನಡ ಅಧ್ಯಾಪಕ ಭವನದಿಂದ ವರ್ಣರಂಜಿತ ಮೆರವಣಿಗೆ ನಡೆಯಿತು.
ಅಪರಾಹ್ನ ಅಧ್ಯಾಪಕರಿಂದ ಬರ್ಬರೀಕ ನಾಟಕ ಪ್ರದರ್ಶನಗೊಂಡಿತು. ಆ ಬಳಿಕ ಪ್ರತಿನಿಧಿ ಸಮ್ಮೇಳನ, ಅಧ್ಯಾಪಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


