FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Tuesday, 5 May 2026

ಕನ್ನಡ ಅಧ್ಯಾಪಕ ಸಂಘದ ಕೇಂದ್ರ ಸಮಿತಿಯ ಮಹಾಸಭೆ :

        ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ) ಕಾಸರಗೋಡು ಇದರ ಕೇಂದ್ರ ಸಮಿತಿಯ ಮಹಾಸಭೆಯು ಇಂದು ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು. 

       ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಸುಕೇಶ್ ಎ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ  ವಾರ್ಷಿಕ ವರದಿ ವಾಚಿಸಿದರು. ಲೆಕ್ಕ ಪತ್ರವನ್ನು ಕೋಶಾಧಿಕಾರಿ ಶ್ರೀಮತಿ ಶ್ರೀ ಶರತ್ ಕುಮಾರ್  ಮಂಡಿಸಿದರು. ಬಳಿಕ ಸಂಘಟನಾತ್ಮಕ ಚರ್ಚೆ ನಡೆಯಿತು‌‌.  ಕುಂಬಳೆ ಉಪಜಿಲ್ಲಾ ಅಧ್ಯಕ್ಷರಾದ ಶ್ರೀಹರ್ಷ ಎಂ. ಪಿ, ಬೇಕಲ-ಹೊಸದುರ್ಗ ಉಪಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವಿಠಲ ಅಡ್ವಳ, ಕಾಸರಗೋಡು ಉಪಜಿಲ್ಲಾ ಅಧ್ಯಕ್ಷರಾದ ಶ್ರೀ ಕುಶ ಪಿ.ಎಲ್, ಕಾರ್ಯದರ್ಶಿ ಪೂರ್ಣಿಮಾ ಯಂ,ಕೋಶಾಧಿಕಾರಿ ಸುರೇಖಾ ಕೆ ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಎಂ,ಕೋಶಾಧಿಕಾರಿ ಕಿಶೋರ್ ಕುಮಾರ್ ಚರ್ಚೆಯಲ್ಲಿ ಭಾಗವಹಿಸಿದರು. 

       ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ , ಶ್ರೀಮತಿ ಶ್ರೀಲತಾ ಕೆ, ಕಾರ್ಯದರ್ಶಿಗಳಾದ ಜಯಪ್ರಶಾಂತ್ ಪಾಲೆಂಗ್ರಿ, ಪ್ರದೀಪ್ ಕೆ.ವಿ ಉಪಸ್ಥಿತರಿದ್ದರು.

       ಬಳಿಕ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಿ.ಡಬ್ಲ್ಯೂ.ಎಲ್.ಪಿ.ಶಾಲೆ ಮಂಜೇಶ್ವರದ ಮುಖ್ಯ ಶಿಕ್ಷಕ ಶ್ರೀ ಸುಕೇಶ್ , ಪ್ರಧಾನ ಕಾರ್ಯದರ್ಶಿಯಾಗಿ ಎ.ಎಲ್.ಪಿ.ಶಾಲೆ ಕಿಳಿಂಗಾರಿನ ಶಿಕ್ಷಕ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ಪುನರಾಯ್ಕೆಯಾದರೆ, ಕೋಶಾಧಿಕಾರಿಯಾಗಿ ಎ.ಯು.ಪಿ ಶಾಲೆ ಬೋವಿಕ್ಕಾನದ ಶೀ ಪ್ರದೀಪ್ ಕೆ.ವಿ ಜತೆ ಕೋಶಾಧಿಕಾರಿಯಾಗಿ ಎ.ಎಸ್.ಬಿ.ಎಸ್.ಕುಂಟಿಕಾನದ ಶಿಕ್ಷಕ ಶ್ರೀ ಶರತ್ ಕುಮಾರ್  ಯಂ ಅವಿರೋಧವಾಗಿ ಆಯ್ಕೆಯಾದರು.

       ಉಪಾಧ್ಯಕ್ಷರಾಗಿ ಕೂಡ್ಲು ಶಾಲೆಯ ಶಿಕ್ಷಕಿ ಶ್ರೀಮತಿ ಶ್ರೀಲತಾ ಕೆ , ವಿದ್ಯಾರಣ್ಯ ಎ.ಎಲ್.ಪಿ. ಶಾಲೆ ಬೆರಿಪದವಿನ ಮುಖ್ಯ ಶಿಕ್ಷಕ ಶ್ರೀ ಉಮೇಶ್ ಕೆ, ಎ.ಎಲ್.ಪಿ. ಶಾಲೆ ಇಚ್ಲಂಗೋಡಿನ ಮುಖ್ಯ ಶಿಕ್ಷಕ ಶ್ರೀ ಜಯರಾಮು ಸಿ. ಎಚ್, ಚಂದ್ರಗಿರಿ ಶಾಲಾ ಮುಖ್ಯ ಶಿಕ್ಷಕಿ ಯಶೋಧಾ, ಕಾರ್ಯದರ್ಶಿಗಳಾಗಿ ಜಿ.ಎಲ್.ಪಿ.ಶಾಲೆ ಕುಳೂರಿನ ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಜಿ.ಎಚ್.ಎಸ್.ಎಸ್. ಕಾರಡ್ಕದ ಶಿಕ್ಷಕ ಡಾ. ಶ್ರೀಶ ಕುಮಾರ್ ಪಂಚಿತ್ತಡ್ಕ, ಎ.ಯು.ಪಿ. ಶಾಲೆ ಆನೆಕಲ್ಲಿನ ಶಿಕ್ಷಕ ಜೀವನ್ ಕುಮಾರ್ , ಜಿ.ಎಚ್.ಎಸ್.ಎಸ್. ಬೆಳ್ಳೂರು ಶಾಲೆಯ ಶಿಕ್ಷಕ ನವೀನ್ ಕುಮಾರ್ ಪಿ , ಸಂಘಟನಾ ಕಾರ್ಯದರ್ಶಿಯಾಗಿ ಜಿ.ಡಬ್ಲ್ಯೂ.ಎಲ್.ಪಿ.ಶಾಲೆ ಮಂಜೇಶ್ವರದ ಶಿಕ್ಷಕ ಶ್ರೀ ಜಬ್ಬಾರ್ ಬಿ, ಅಧಿಕೃತ ವಕ್ತಾರರಾಗಿ ಜಿ.ಎಚ್.ಎಸ್.ಎಸ್.ಬಂದಡ್ಕದ ಶಿಕ್ಷಕ ಶ್ರೀ ಬಾಬು ಕೆ, ಲೆಕ್ಕ ಪರಿಶೋಧಕರಾಗಿ ಜಿ.ಎಲ್.ಪಿ.ಶಾಲೆ ಪನೆಯಾಲದ ಶಿಕ್ಷಕ ಶ್ರೀ ಪುರುಷೋತ್ತಮ ಕುಲಾಲ್ ಹಾಗೂ ಜಿ.ಎಚ್.ಎಸ್.ಎಸ್. ಕಾಸರಗೋಡಿನ ಶಿಕ್ಷಕ ಶ್ರೀ ಅಬ್ದುಲ್ ರಹಿಮಾನ್ ಅವಿರೋಧವಾಗಿ ಆಯ್ಕೆಯಾದರು.

     ಕಾರ್ಯಕ್ರಮದಲ್ಲಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಶ್ರೀ ಪ್ರದೀಪ್ ಕೆ.ವಿ ವಂದಿಸಿದರು. ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.









Sunday, 29 March 2026

ಕನ್ನಡ ಮಾಧ್ಯಮ ಅಧ್ಯಾಪಕರಿಗೆ 2025-26 ನೇ ಸಾಲಿನ ವಿದಾಯಕೂಟ ಸಮಾರಂಭ :

       ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ವತಿಯಿಂದ 2025-26ನೇ ಸಾಲಿನಲ್ಲಿ ನಿವೃತ್ತಿ ಹೊಂದುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕ ಶಿಕ್ಷಕಿಯರಿಗೆ ವಿದಾಯ ಕೂಟ ಸಮಾರಂಭ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು. 

      ಕಾರ್ಯಕ್ರಮವನ್ನು ಕಾಸರಗೋಡು ಸರಕಾರಿ ಕಾಲೇಜು ನಿವೃತ್ತ ಕನ್ನಡ ಪ್ರಾಧ್ಯಾಪಿಕೆ ಯು ಮಹೇಶ್ವರಿ  ಉದ್ಘಾಟಿಸಿ " ನಮ್ಮ ಹಿರಿಯರು ಕನ್ನಡವನ್ನು ಉಳಿಸಿ ಬೆಳೆಸಲು ತುಂಬಾ ಪ್ರಯತ್ನಪಟ್ಟಿದ್ದಾರೆ ಅವರ ಶ್ರಮದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ನಾವು ಕೂಡಾ ಹಿರಿಯರು ಮಾಡಿದ ಸಾಧನೆ ಕೆಲಸಗಳನ್ನು ಮಾಡಬೇಕು. ಕನ್ನಡಕ್ಕಾಗಿ ಹೋರಾಡಿದಂತಹ ಮಹನೀಯರನ್ನು ನಾವು ಮರೆಯಬಾರದು, ಅವರ ಹೋರಾಟದ ಆ ಫಲವನ್ನು ನಾವು ಇಂದು ನಮ್ಮ ಮಣ್ಣಿನ ಭಾಷೆಯನ್ನು ಉಳಿಸಲು ಪ್ರಯತ್ನ ಮಾಡಬೇಕು " ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸುಕೇಶ ಎ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಸಾಹಿತಿ, ಪತ್ರಕರ್ತರಾದ ರಾಧಾಕೃಷ್ಣ ಉಳಿಯತ್ತಡ್ಕ ಮುಖ್ಯ ಅತಿಥಿಗಳಾಗಿದ್ದರು. ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಸವಿತಾ ಪುಂಡೂರು, ಕಾಸರಗೋಡು ಡಿ. ಪಿ. ಒ ಆಗಸ್ಟಿನ್ ಬರ್ನಾಡ್ ಮೊಂತೆರೊ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಯಂ, ನಿವೃತ್ತ ವಿದ್ಯಾಧಿಕಾರಿಗಳಾದ ಪುಂಡರೀಕಾಕ್ಷ ಆಚಾರ್ಯ, ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಪ್ರಭಾವತಿ ಕೆದಿಲಾಯ ಉಪಸ್ಥಿತರಿದ್ದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ವಕ್ತಾರರಾದ ಸುಕೇಶ್ ಎ ಪ್ರಾಸ್ತಾವಿಕ ಮಾತನಾಡಿದರು.

         2025-26 ನೇ ಸಾಲಿನಲ್ಲಿ ನಿವೃತ್ತಿ ಹೊಂದುವ ಕನ್ನಡ ಮಾಧ್ಯಮದ ಶಿಕ್ಷಕ ಶಿಕ್ಷಕಿಯರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. 

       ಕಾರ್ಯಕ್ರಮದಲ್ಲಿ ಅಧ್ಯಾಪಕ ಸಂಘದ ವಿವಿಧ ಹುದ್ದೆಗಳನ್ನಲಂಕರಿಸಿದ್ದ ಮಾಜಿ‌ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು.

ಸೇವೆಯಿಂದ ನಿವೃತ್ತಿ ಹೊಂದುವವರ ಪರಿಚಯವನ್ನು ಕಾಸರಗೋಡು , ಬೇಕಲ ಹೊಸ ದುರ್ಗ ಉಪಜಿಲ್ಲೆಯ ಸುರೇಖಾ ,ವನಿತಾ, ವಿನೀತಾ,ಪೂರ್ಣಿಮಾ, ನಿರೀಕ್ಷಾ,ವಿಜಯ ಕುಮಾರಿ, ರೋಹಿತಾಕ್ಷಿ, ಕವಿತ,ವಿದ್ಯಾ, 

ಕುಂಬಳೆ ಉಪಜಿಲ್ಲೆಯ ಅಂಕಿತ ಎಂ ,ಸೌಮ್ಯ ಕುಮಾರಿ,ವನಜ ಸಿ ಹೆಚ್,ಶ್ಯಾಮಲಾ ಕುಮಾರಿ,ಮಹಾಗಣಪತಿ,ಜ್ಯೋತ್ಸ್ನಾ ,ತಿರುಮಲೇಶ್,ಶಶಿಧರ ಕೆ,ವೀಕ್ಷಿತ ಕೆ , ಕಮಲಾಕ್ಷ ನಾಯಕ್ 

ಮಂಜೇಶ್ವರ ಉಪಜಿಲ್ಲೆಯ

 ಪ್ರಶಾಂತ ಹೊಳ್ಳ ,ರೇಖಾ,ಹರೀಶ್ ಕುಮಾರ್ ,ದೀಪಿಕಾ ಕೆ ,ಜಯಪ್ರಶಾಂತ್ ಪಾಲೆಂಗ್ರಿ,ನೀತಾ,ಹರಿಣಾಕ್ಷಿ,ಶಂಕರನಾರಾಯಣ ಭಟ್

ಮಮತ,ಜಯರಾಮ ಸಿ ಯಚ್ ,ಸ್ಮಿತಾ ಬಿ ,ಗಣೇಶ್,ಸುನಿಲ್ ಕುಮಾರ್ ಯಂ , ಕವಿತಾ ಕೂಡ್ಲು,ಪ್ರದೀಪ್,ಅಶೋಕ್ ಕುಮಾರ್ ಕೊಡ್ಲಮೊಗರು ,ಚಂದ್ರಿಕ,ಭವ್ಯ,ಉಮೇಶ್ ಬಾಯಾರ್

ಮೊದಲಾದವರು ಪರಿಚಯ ಮಾಡಿದರು.

        ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧಿಕೃತ ವಕ್ತಾರರಾದ ಬಾಬು ಕೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೋಶಾಧಿಕಾರಿ ಶರತ್ ಕುಮಾರ್ ಯಂ ವಂದಿಸಿದರು.ಸಂಘಟನಾ ಕಾರ್ಯದರ್ಶಿ ಜಬ್ಬಾರ್, ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ,  ಉಪಾಧ್ಯಕ್ಷೆ ಶ್ರೀಲತಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಸಂಘಟನೆಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.













































Saturday, 2 August 2025

ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದಿಂದ ಕೆ.ಟೆಟ್ ಮತ್ತು ಇಲಾಖೆ ಪರೀಕ್ಷೆ ಕೆ. ಎಸ್. ಆರ್ , ಕೆ.ಇ.ಆರ್ ತರಬೇತಿ ತರಗತಿ ಉದ್ಘಾಟನೆ :

          ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ಕೇಂದ್ರ ಸಮಿತಿಯ ವತಿಯಿಂದ ಅಧ್ಯಾಪಕರು, ಮುಖ್ಯೋಪಾಧ್ಯಾಯರಾಗಿ‌ ಭಡ್ತಿ ಹೊಂದುವ 2025 ರ ಇಲಾಖೆ ಪರೀಕ್ಷೆ ಕೆ.ಎಸ್.ಆರ್ ಮತ್ತು ಕೆ.ಇ.ಆರ್ ನ  ತರಗತಿ ಮತ್ತು ಅಧ್ಯಾಪಕರ ಯೋಗ್ಯತಾ ಪರೀಕ್ಷೆ ಕೆ ಟೆಟ್  ತರಬೇತಿ ತರಗತಿಯ ಉದ್ಘಾಟನೆಯನ್ನು  ಸರಕಾರಿ ಹಿರಿಯ ಬುನಾದಿ ಶಾಲೆಯಲ್ಲಿ ನಡೆಸಲಾಯಿತು. 

Saturday, 28 June 2025

ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದಿಂದ ಅಗಲಿದ ದಿನೇಶ್ ವಿ ಯವರಿಗೆ ನುಡಿನಮನ

         ಕೇರಳ ಪ್ರಾಂತ್ಯ‌ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆ ಕಾಸರಗೋಡು ಇದರ ಕೇಂದ್ರ ಸಮಿತಿಯ ಸಭೆಯಲ್ಲಿ ನಿವೃತ್ತ ಶಿಕ್ಷಣ ಉಪನಿರ್ದೇಶಕರಾದ ಶ್ರೀ ದಿನೇಶ್ ವಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. 

Sunday, 8 December 2024

ಅಧ್ಯಾಪಕರ ಕಲೋತ್ಸವ - ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರು :

 ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆ (ರಿ) ಕಾಸರಗೋಡು

ಅಧ್ಯಾಪಕರ ಕಲೋತ್ಸವ

ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರು


🏆🏆 ಜಾನಪದ ಗೀತೆ ಗಾಯನ 🏆🏆


🥇ಪ್ರಥಮ : ಅನುಷ ಎಸ್ - ಜಿ.ಡಬ್ಲ್ಯೂ.ಎಲ್.ಪಿ.ಶಾಲೆ ಕುಂಬಳೆ

🥈ದ್ವಿತೀಯ : ಶೋಭಿತಾ ಎನ್ - ಶ್ರೀ ಶಾರದಾ ಎ.ಎಲ್.ಪಿ.ಶಾಲೆ ಕನಿಯಾಲ &

                    ದಿವಾಕರ ಬಲ್ಲಾಳ್ ಎ.ಬಿ - ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು

🥉ತೃತೀಯ : ಎನ್ ಮಹಾಲಿಂಗ ಭಟ್ - ಎ.ಯು.ಪಿ.ಶಾಲೆ ಧರ್ಮತ್ತಡ್ಕ &

                    ರಮ್ಯಶ್ರೀ ಜಿ.ಯು.ಪಿ.ಶಾಲೆ ನುಳ್ಳಿಪ್ಪಾಡಿ


🏆🏆 ಕವಿತಾ ರಚನೆ 🏆🏆


🥇ಪ್ರಥಮ : ಜ್ಯೋತ್ಸ್ನಾ ಯಂ ಎನ್ ಎಚ್ ಎಸ್ ಎಸ್ ಪೆರಡಾಲ

🥈ದ್ವಿತೀಯ : ಡಾ.ಸೌಮ್ಯ ಪಿ. ಜಿ.ಎಚ್ ಎಸ್ ಎಸ್ ಮೊಗ್ರಾಲ್ ಪುತ್ತೂರು

🥉ತೃತೀಯ : ಅಶ್ವಿನಿ ಪ್ರದೀಪ್ ಎ.ಜೆ.ಬಿ ಶಾಲೆ ಪುತ್ತಿಗೆ


🏆🏆 ಆಶುಭಾಷಣ 🏆🏆


🥇ಪ್ರಥಮ : ಶ್ರೀರಾಮ ಕೆದುಕೋಡಿ ಎಸ್.ಡಿ.ಪಿ.ಎ.ಯು.ಪಿ ಶಾಲೆ ಸಜಂಕಿಲ

🥈ದ್ವಿತೀಯ : ವಿಠಲ ಎ ಜಿ.ಎಲ್.ಪಿ ಶಾಲೆ ಕಲ್ಲಪಳ್ಳಿ

🥉ತೃತೀಯ : ದಿವಾಕರ ಬಲ್ಲಾಳ್ ಎ.ಬಿ - ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು


🏆🏆 ಚಿತ್ರರಚನೆ 🏆🏆


🥇ಪ್ರಥಮ : ಜಯಪ್ರಕಾಶ್ ಶೆಟ್ಟಿ ಬೇಳ ಎಸ್.ಎ.ಟಿ.ಎಚ್ ಶಾಲೆ ಮಂಜೇಶ್ವರ

🥈ದ್ವಿತೀಯ : ಉಮೇಶ ಕೆ. ವಿದ್ಯಾರಣ್ಯ ಎ.ಎಲ್.ಪಿ ಶಾಲೆ ಬೆರಿಪದವು

🥉ತೃತೀಯ : ಪ್ರದೀಪ್ ಕುಮಾರ್ ಶೆಟ್ಟಿ ಎ.ಎಲ್.ಪಿ ಶಾಲೆ ಕಿಳಿಂಗಾರು


🏆🏆 ಕಥಾ ರಚನೆ 🏆🏆


🥇ಪ್ರಥಮ : ರಾಜೇಶ್ ಎಸ್. ಜಿ.ಎಚ್.ಶಾಲೆ ಪೆರಡಾಲ

🥈ದ್ವಿತೀಯ : ಡಾ. ಶ್ರೀಶಕುಮಾರ್ ಪಂಜಿತ್ತಡ್ಕ ಜಿ.ವಿ.ಎಚ್.ಎಸ್ ಶಾಲೆ ಕಾರಡ್ಕ &

                  ಡಾ. ಸೌಮ್ಯ ಪಿ. ಜಿ ಎಚ್ ಎಸ್ ಶಾಲೆ ಮೊಗ್ರಾಲ್ ಪುತ್ತೂರು

🥉ತೃತೀಯ : ರಮ್ಯಶ್ರೀ ಜಿ.ಯು.ಪಿ.ಶಾಲೆ ನುಳ್ಳಿಪ್ಪಾಡಿ &

                    ಸವಿತಾ ಸಿ ಎಚ್ ಎಸ್.ಎಸ್ ಎ ಎಲ್ ಪಿ ಶಾಲೆ ಪನೆಯಾಲ


ಎಲ್ಲಾ ವಿಜೇತರಿಗೂ ಅಭಿನಂದನೆಗಳು ಹಾಗೂ ಭಾವವಹಿಸಿದ ಎಲ್ಲರಿಗೂ ಧನ್ಯವಾದಗಳು....

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಅಧ್ಯಾಪಕರ ಕಲೋತ್ಸವ :

           ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಅಧ್ಯಾಪಕರ ಕಲೋತ್ಸವ ಕಾಸರಗೋಡು ಬೀರಂತಬೈಲು ಅಧ್ಯಾಪಕ ಭವನದಲ್ಲಿ ಜರಗಿತು. 

Thursday, 5 December 2024

ಕನ್ನಡ ಎಲ್.ಪಿ ಎಸ್ ಟಿ ಹುದ್ದೆಗಳ ಭರ್ತಿಗೆ ಕನ್ನಡ ಅಧ್ಯಾಪಕರ ಸಂಘ ಆಗ್ರಹ

          ಕಾಸರಗೋಡು ಕನ್ನಡ ಶಾಲೆಗಳಲ್ಲಿನ ಎಲ್.ಪಿ.ಎಸ್ ಟಿ ಹುದ್ದೆಗಳನ್ನು ಕೂಡಲೇ ಭರ್ತಿಮಾಡಬೇಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಕೇಂದ್ರ ಸಮಿತಿಯು ಆಗ್ರಹಿಸಿದೆ. ಉಪಜಿಲ್ಲಾ ಮಟ್ಟ ಹಾಗೂ ಜಿಲ್ಲಾ ಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಕಾರ್ಯಕ್ರಮಗಳಲ್ಲಿ ಕನ್ನಡದ ಅವಗಣನೆಯನ್ನು ಖಂಡಿಸಲಾಯಿತು.ಕನ್ನಡ ದೈಹಿಕ ಶಿಕ್ಷಣ ಅಧ್ಯಾಪಕರ ನೇಮಕಾತಿಯನ್ನು ತ್ವರಿತ ಗೊಳಿಸಲು ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಲಾಯಿತು.

            ನಿಯೋಗದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಶರತ್ ಕುಮಾರ್, ಅಧಿಕೃತ ವಕ್ತಾರರಾದ ಸುಕೇಶ, ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ಜೀವನ್ ಕುಮಾರ್ ಉಪಸ್ಥಿತರಿದ್ದರು.