FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Sunday, 11 October 2015

-->
11-10-2015.
''ಕಯ್ಯಾರರಿಗೆ ಅಕ್ಷರಾಂಜಲಿ" ಸಿದ್ಧತೆಯಲ್ಲಿ ಕನ್ನಡ ಅಧ್ಯಾಪಕ ಸಂಘ.
         ಕನ್ನಡದ ಕವಿ ಕಯ್ಯಾರರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಅವರ ಸ್ಮರಣೆಗಾಗಿ ಕಾಸರಗೋಡಿನ ಶಾಲಾ ಮಕ್ಕಳಿಗೆ ಸಾಹಿತ್ಯಾಸಕ್ತಿ ಮೂಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿದೆ. ಇದಕ್ಕಾಗಿ ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಪ್ರೌಢ ಶಾಲಾ ವಿಭಾಗಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ವಿವಿಧ ಸಾಹಿತ್ತಿಕ ಸ್ಪರ್ದೆಗಳ್ನು ಏರ್ಪಡಿಸುವುದು ಮಾತ್ರವಲ್ಲದೆ ಅವರ ಕವನವನ್ನು ಹಾಡುವ ಮೂಲಕ ಅಕ್ಷರಾಂಜಲಿ ಸಲ್ಲಿಸಲಾಗುವುದು. ಈ ಕಾರ್ಯಕ್ರಮ ನವೆಂಬರ್ ತಿಂಗಳ ಎರಡನೇ ಶನಿವಾರ ನಡೆಯುವುದು. ಎಲ್ಲಾ ಶಾಲೆಯ ಭಾಗವಹಿಸುವಿಕೆಯನ್ನು ಸಂಘಟನೆಯ ಕಾರ್ಯಕರ್ತರು ಧೃಢಪಡಸಬೇಕಾಗಿದೆ, ಎ೦ದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ಹೇಳಿದರು. ಅವರು ಕೇಂದ್ರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಂಘಟನೆಯ ಕೇಂದ್ರ ಸಮಿತಿ ಸಭೆಯು ಕಾಸರಗೋಡಿನ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಜರಗಿತು. ರಾಜ್ಯ ಸಮ್ಮೇಳನ, ಸಂಘಟನೆಯ ಬಲವರ್ಧನೆ ಮತ್ತು ತುರ್ತು ಕಾರ್ಯಗಳ ಬಗ್ಗೆ ಸಮಾಲೋಚನೆ ನಡೆಯಿತು. ಅಂಗನವಾಡಿಗಳಲ್ಲಿ ಕನ್ನಡ ಅವಗಣನೆ, ಚುನಾವಣೆ ಸಮಯದಲ್ಲಿ ಕನ್ನಡ ಚುನಾವಣಾಧಿಕಾರಿಗಳಿಗೆ ಉಂಟಾಗುವ ತೊಡಕು ಮತ್ತು ಪರಿಹಾರೋಪಾಯಗಳ ಬಗ್ಗೆ ಚರ್ಚಿಸಲು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ನಿಯೋಗ ರಚಿಸಲಾಯಿತು.
           ಕುಂಬಳೆ ಉಪಜಿಲ್ಲಾಧ್ಯಕ್ಷರಾದ ಜ್ಯೋತಿ ಕೆ, ಕಾರ್ಯದರ್ಶಿ ಪ್ರದೀಪ್ ಕುಮಾರ್ ಕೆ , ಖಜಾಂಜಿ ಕಿರಣಶಂಕರ ಕೆ.ಎಸ್.ಮತ್ತು ಪ್ರಭಾವತಿ ಕೆದಿಲಾಯ ಪುಂಡೂರು ಕಯ್ಯಾರರಿಗೆ ಅಕ್ಷರಾಂಜಲಿಯ ಕುರಿತು ರೂಪುರೇಷೆಯನ್ನು ಮಂಡಿಸಿದರು. ಮಂಜೇಶ್ವರ ಘಟಕಾಧ್ಯಕ್ಷರಾದ ರವೀಂದ್ರನಾಥ ಕೆ.ಆರ್ ಮತ್ತು ಕಾರ್ಯದರ್ಶಿ ಅಶೋಕ ಕೊಡ್ಲಮೊಗರು ಪಂಚಾಯತ್ ಮಟ್ಟದಲ್ಲಿ ಸಂಘಟನೆಯ ಬಲವರ್ಧನೆಯ ಕುರಿತು ಚಿತ್ರಣ ನೀಡಿದರು.ಕಾಸರಗೋಡು ಘಟಕದ ಕಾರ್ಯದರ್ಶಿ ನವೀನ್ ಕುಮಾರ್ ,ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕಳ ಮತ್ತು ಪರಮೇಶ್ವರಿ ವೈ, ಎಲ್ಲಾ ಕನ್ನಡ ಶಾಲೆಗಳಲ್ಲಿ ದಸರಾ ನಾಡಹಬ್ಬ ಆಚರಣೆ ಮಾಡಬೇಕೆಂಬ ಜಿಲ್ಲಾ ಶಿಕ್ಷಣ ನಿರ್ದೇಶಕರ ನಿರ್ದೇಶವನ್ನು ಕನ್ನಡ ಶಾಲೆಗಳಲ್ಲಿ ಅನುಷ್ಠಾನಕ್ಕೆ ತರುವ ಬಗ್ಗೆ ರೂಪುರೇಷೆ ತಯಾರಿಸಿ ಮಂಡಿಸಿದರು.
ನಿಕಟ ಪೂರ್ವಾಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್, ಚಂದ್ರಹಾಸ ಪಿ. , ಬಿ.ರಾಜು ಸ್ಟೀವನ್ ಕ್ರಾಸ್ತಾ, ಬೇಬಿ ಸವಿತಾ , ವಾಣಿ ಪಿ.ಎಸ್, ಸಂಧ್ಯಾರಾಣಿ ಬಿ.ಕೆ ಮತ್ತು ಉಮೇಶ ಕೆ ಸಂಘಟನೆಯ ಬಲವರ್ಧನೆಯ ಕುರಿತು ರೂಪುರೇಷೆ ಪ್ರಸ್ತುತ ಪಡಿಸಿದರು.
         ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ವಂದಿಸಿದರು.

Friday, 9 October 2015

09-10-2015
ಕೇಂದ್ರ ಸಮಿತಿ ಸಭೆ- ಆಮಂತ್ರಣ.
ಪ್ರಿಯರೇ,
         ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಸಮಿತಿ ಸಭೆಯು ದಿನಾಂಕ 11-10-2015 ನೇ ರವಿವಾರ ಪೂರ್ವಾಹ್ನ 10.00 ಗಂಟೆಗೆ ಸರಿಯಾಗಿ ಕಾಸರಗೋಡಿನ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಲಿದೆ. ಎಲ್ಲಾ ಕೇಂದ್ರ ಸಮಿತಿ ಸದಸ್ಯರು ಅಗತ್ಯ ಹಾಜರಿರಬೇಕಾಗಿ ವಿನಂತಿ. 
 ಅಧ್ಯಕ್ಷರು ಮತ್ತು ಸದಸ್ಯರು
                                                                                       
ಅಜಂಡಾಃ 1.ಕಯ್ಯಾರರ ಸ್ಮರಣಾರ್ಥ ಕಾರ್ಯಕ್ರಮ.
         2.ವಾರ್ಷಿಕ ಕ್ಯಾಲೆಂಡರ್ ನಿರ್ಮಾಣ.
         3.ರಾಜ್ಯ ಸಮ್ಮೇಳನ.
         4.ಇತರ.
ಸೂಚನೆ. ಮಂಜೇಶ್ವರ, ಕುಂಬಳೆ, ಕಾಸರಗೋಡು ಮತ್ತು ಬೇಕಲ-ಹೊಸದುರ್ಗ ಉಪಜಿಲ್ಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಖಜಾಂಜಿಗಳು ಮತ್ತು ಕೇಂದ್ರ ಸಮಿತಿ ಸದಸ್ಯರು, ಕೇಂದ್ರಸಮಿತಿಗೆ ವಿಶೇಷ ಆಹ್ವಾನಿತರು ಮತ್ತು ಕಾಲೇಜು ಪ್ರತಿನಿಧಿಗಳು ಕೇಂದ್ರ ಸಮಿತಿಯ ಸದಸ್ಯರಾಗಿರುತ್ತಾರೆ.







Monday, 21 September 2015


21-09-2015.
ಕನ್ನಡ ಅಧ್ಯಾಪಕ ಸಂಘದ ವತಿಯಿಂದ ಪದಾಧಿಕಾರಿಗಳಿಗೆ ಬಲವರ್ಧನೆಯ ಶಿಬಿರ ಅನಿವಾರ್ಯ- ಇ ವೇಣುಗೋಪಾಲನ್. ಜಿಲ್ಲಾ ಶಿಕ್ಷಣಾಧಿಕಾರಿ.  
ಕಾಸರಗೋಡು, ಕನ್ನಡ ಅಧ್ಯಾಪಕ ಸಂಘದ ಸದಸ್ಯರೆಲ್ಲರೂ ಸಂಘಟನೆಯ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಿಸಿ ಪ್ರಚಲಿತ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು. ಶೈಕ್ಷಣಿಕ ವಿಚಾರಗಳಾಗಲಿ, ಆಡಳಿತಾತ್ಮಕ ವಿಚಾರಗಳಾಗಲಿ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಪ್ರತ್ಯೇಕ ಪರಿಗಣನೆ ಇದ್ದೇ ಇದೆ. ಆದರೆ ಅವುಗಳ ಕೊಡು ಕೊಳ್ಳುವಿಕೆಯಲ್ಲಿ ಅರಿವಿನ ಕೊರತೆಯು ತೊಡಕಾಗಿದೆ. ಇದಕ್ಕಾಗಿ ಅಧ್ಯಾಪಕರ ಸಂಘವು ಸಂಘಟನೆಯ ಸದಸ್ಯರಿಗೆ ಶಿಬಿರಗಳನ್ನು ಕಡ್ಡಾಯಗೊಳಿಸಿ ಬಲವರ್ಧನೆ ಮಾಡಬೇಕು. ಕೇರಳದ ರಾಜಕೀಯ ಬೆಂಬಲಿತ ಸಂಘಟನೆಗಳಲ್ಲಿ ಇದು ನಡೆಯುತ್ತಿದ್ದು ಇದನ್ನು ನಾವೂ ಅನುಕರಸಿ ನಮ್ಮ ಸಂಘಟನೆಯನ್ನು ಬಲಪಡಿಸಬೇಕು ಎ೦ದು ಕಾಸರಗೋಡು ಶೈಕ್ಷಣಿಕ ಜಿಲ್ಲಾ ಶಿಕ್ಷಣಾಧಿಕಾರಿ ಇ ವೇಣುಗೋಪಾಲನ್ ನುಡಿದರು. ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರಾಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್ ವಹಿಸಿದ್ದರು. ಉಪಾಧ್ಯಕ್ಷರುಗಳಾದ ಕೆ.ವಿ.ಸತ್ಯನಾರಾಯಣ ರಾವ್, ಡಾ.ರತ್ನಾಕರ ಮಲ್ಲಮೂಲೆ, ಖಜಾಂಜಿ ಪದ್ಮಾವತಿ ಎ೦ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ ಸುಕೇಶ್ ಎ ವಂದಿಸಿದರು ಪುರುಷೋತ್ತಮ ಕುಲಾಲ್ ನಿರೂಪಿಸಿದರು.
ನಂತರ ವರದಿ ವಾಚನ, ಲೆಕ್ಕಪತ್ರ ಮಂಡನೆ, ಸದಸ್ಯರಿಂದ ಚರ್ಚೆ, ಕ್ರೋಡೀಕರಣ ನಡೆಯಿತು. ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಮಹಾಲಿಂಗೇಶ್ವರ ಭಟ್ ಎ೦.ವಿ.ಮುಖ್ಯ ಶಿಕ್ಷಕರು, ಝಡ್. ಎ.ಎಲ್.ಪಿ.ಎಸ್. ಕುಂಜಾರು, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಮುಖ್ಯ ಶಿಕ್ಷಕರು,ಜಿ.ಎಲ್.ಎಸ್ ಮಾಣಿಮೂಲೆ, ಖಜಾಂಜಿ ಸುಕೇಶ ಎ ಜಿ.ಯು.ಪಿ.ಎಸ್. ಮೂಡಂಬೈಲು, ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಜಿ.ಎಚ್.ಎಸ್.ಎಸ್. ಅಂಗಡಿಮೊಗರು, ಉಪಾಧ್ಯಕ್ಷರುಗಳಾಗಿ ಕೆ.ವಿ.ಸತ್ಯನಾರಾಯಣ ರಾವ್ ಮುಖ್ಯ ಶಿಕ್ಷಕರು, ಜಿ.ಎಚ್.ಎಸ್.ಸೂರಂಬೈಲು ಮತ್ತು ಕೆ.ಸತ್ಯನಾರಾಯಣ ಭಟ್ ಮುಖ್ಯ ಶಿಕ್ಷಕರು ಎ.ಯು.ಪಿ.ಎಸ್. ಆನೆಕಲ್ಲು, ಜತೆ ಕಾರ್ಯದರ್ಶಿಗಳಾಗಿ ಪ್ರಭಾವತಿ ಕೆದಿಲ್ಲಾಯ ಎನ್.ಎಚ್.ಎಸ್.ಪೆರಡಾಲ ಮತ್ತು ಉಮೇಶ ಕೆ ಮುಖ್ಯ ಶಿಕ್ಷಕರು ವಿ.ಎ.ಎಲ್.ಪಿ.ಎಸ್ ಬೆರಿಪದವು, ಅಧಿಕೃತ ವಕ್ತಾರ ವಿಶಾಲಾಕ್ಷ ಪುತ್ರಕಳ ಎಸ್.ಜಿ.ಕೆ.ಎಚ್.ಎಸ್.ಕೂಡ್ಲು, ಲೆಕ್ಕಪರಿಶೋಧಕರಾಗಿ ಡಿ.ಮಹಾಲಿಂಗೇಶ್ವರ ರಾಜ್ ಜಿಲ್ಲಾ ಶಿಕ್ಷಣಾಧಿಕಾರಿ ಕಾಞ್ಞಂಗಾಡು ಮತ್ತು ಬಿ.ಸೂರ್ಯನಾರಾಯಣ ಮುಖ್ಯ ಶಿಕ್ಷಕರು ಎ.ಎಲ್.ಪಿ.ಎಸ್. ಬೆಳಿಂಜೆ ಆಯ್ಕೆಯಾದರು.

Tuesday, 15 September 2015


ಅಧ್ಯಕ್ಷರುಃ ಸುಭಾಷ್ ಚಂದ್ರ ಎಂ.ಕೆ.
ಕಾರ್ಯದರ್ಶಿಃ ನವೀನ್ ಕುಮಾರ್
ಖಜಾಂಜಿಃ ಬಾಬು,ಕೆ.

Sunday, 16 August 2015


16-08-2015
ಕಯ್ಯಾರರ ದಾರಿದೀಪ ನಮ್ಮ ಕತ್ತಲೆಯನ್ನು ಹೋಗಲಾಡಿಸಲಿ.
 
ಶತಮಾನ ಕಂಡ ಶತಾಯುಷಿ ನಾಡೋಜ ಡಾ/ ಕಯ್ಯಾರ ಕಿಞ್ಞಣ್ಣ ರೈ ಇವರು ಅಪ್ರತಿಮ ಹೋರಾಟಗಾರು, ಅನ್ಯಾಯವನ್ನು ಎದುರಿಸುವಲ್ಲಿ ಅವರ ದಿಟ್ಟತನ ಎಲ್ಲರಿಗೂ ಮಾದರಿಯಾದುದು.ಬಹು ಭಾಷಾ ಪಂಡಿತರೂ ಆದರ್ಶ ಶಿಕ್ಷಕರೂ ಆದ ಇವರ ಸಾಧನೆ ಅಪಾರ. ಕಾಸರಗೋಡು ಕನ್ನಡಿಗರ ಮುಖ್ಯ ಧ್ವನಿಯೆಂದೇ ಗುರುತಿಸಲ್ಪಟ್ಟ ಇವರ ಮಾರ್ಗದರ್ಶನ ಯುವಜನಾಂಗಕ್ಕೆ ದಾರಿದೀಪವಾಗಿದೆ, ಎ೦ದು ಎಸ್.ವಿ.ಭಟ್ ಅಧ್ಯಕ್ಷರು ಕ.ಸಾ.ಪ.ಕಾಸರಗೋಡು ಘಟಕ ಇವರು ನುಡಿದರು. ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಜರಗಿದ ಕಯ್ಯಾರಿಗೆ ನುಡಿನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಿವೃತ್ತ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ.ಪುಂಡರೀಕಾಕ್ಷ ಆಚಾರ್ಯ, ನಿವೃತ್ತ ಮುಖ್ಯ ಶಿಕ್ಷಕ ಸತೀಷ ಕೆ, ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕಳ ಮೊದಲಾದವರು ಅಧ್ಯಾಪಕ ಸಂಘದ ನುಡಿನಮನ ಸಲ್ಲಿಸಿ ಶ್ರೀಯುತರನ್ನು ಸ್ಮರಿಸಿದರು. ಕಾಸರಗೋಡು ಘಟಕದ ಅಧ್ಯಕ್ಷರಾದ ರಾಜೇಶ್ವರ ಸಿ.ಎಚ್. ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಪುಷ್ಪಾವತಿ ವಂದಿಸಿದರು.ಸುಭಾಷ್ ಕಾರ್ಯಕ್ರಮ ನಿರೂಪಿಸಿದರು.

Thursday, 13 August 2015

-->
-->
ಕಯ್ಯಾರರಿಗೆ ಕನ್ನಡ ಅಧ್ಯಾಪಕರಿಂದ ನುಡಿನಮನ
ಪ್ರಿಯರೇ,
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ನಾಡೋಜ ಡಾ/ ಕಯ್ಯಾರ ಕಿಞ್ಞಣ್ಣ ರೈಯವರಿಗೆ ನುಡಿನಮನ ಕಾರ್ಯಕ್ರಮವು ಇದೇ ಬರುವ ದಿನಾಂಕ 16-06-2015 ನೇ ರವಿವಾರ ಬೆಳಗ್ಗೆ 10.00 ಗಂಟೆಗೆ ಸರಿಯಾಗಿ ಕಾಸರಗೋಡು ಬೀರಂತಬೈಲಿನಲ್ಲಿರುವ ಅಧ್ಯಾಪಕ ಭವನ ದಲ್ಲಿ ಜರಗಲಿದೆ. ಎಲ್ಲಾ ಶಿಕ್ಷಕ ಬಂಧುಗಳು ಈ ಸಭೆಯಲ್ಲಿ ಹಾಜರಿದ್ದು ಶ್ರೀಯುತರ ಸ್ಮರಣಾಂಜಲಿಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ. ಆ ಬಳಿಕ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕಾಸರಗೋಡು, ಬೇಕಲ- ಹೊಸದುರ್ಗ ಉಪಜಿಲ್ಲಾ ಸಮಾವೇಶವು ಜರಗಲಿದೆ.

14-08-2015
ಅಗೋಸ್ತು 26 ರಂದು ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ.
ಕರ್ನಾಟಕ ಸರಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹೊರರಾಜ್ಯ ಕೇರಳ ಹಾಗೂ ಗೋವಾ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವು ಅಗೋಸ್ತು 26 ರಂದು ಕಾಸರಗೋಡಿನ ನಗರಸಭೆ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯ ವಿವಿಧ ಶಾಲೆಗಳಿಂದ ಎ೦ಭತ್ತಮೂರು ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಡಾ/ ಹನುಮಂತಯ್ಯ, ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಸ್ಥಳೀಯ ಶಾಸಕರು, ಪಿ.ಎಸ್.ಮೊಹಮ್ಮದ್ ಸಗೀರ್ ಜಿಲ್ಲಾಧಿಕಾರಿ, ಡಾ/ಶ್ರೀನಿವಾಸ್ ಎ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ. ಇ.ವೇಣುಗೋಪಾಲನ್, ಜಿಲ್ಲಾ ಶಿಕ್ಷಣಾಧಿಕಾರಿಗಳು. ಕಾಸರಗೋಡು,ಮುರಳೀಧರ ಬಳ್ಳುಕುರಾಯ ಅಧ್ಯಕ್ಷರು ಕರ್ನಾಟಕ ಸಮಿತಿ ಕಾಸರಗೋಡು, ಟಿ.ಡಿ.ಸದಾಶಿವ ರಾವ್ . ಅಧ್ಯಕ್ಷರು ಕೇರಳ ಪ್ರಾಂತ್ಯಕನ್ನಡ ಮಾಧ್ಯಮ ಅಧ್ಯಾಪಕ ಸಂಘ, ಕಾಸರಗೋಡು.ಎಸ್.ವಿ.ಭಟ್, ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಗಡಿನಾಡ ಘಟಕ, ಜಯರಾಂ ಎಡನೀರು ಅಧ್ಯಕ್ಷರು. ಪಾರ್ತಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರ ಕೇರಳ ಸರಕಾರ,ನ್ಯಾಯವಾದಿ ಎ.ಸುಬ್ಬಯ್ಯ ರೈ.ಅಧ್ಯಕ್ಷರು ತುಳು ಅಕಾಡಮಿ ಕೇರಳ ಸರಕಾರ ಮತ್ತು ಕನ್ನಡದ ಪ್ರಸಿದ್ಧ ಸಾಹಿತಿಗಳು, ಶಿಕ್ಷಣ ತಜ್ಞರು ಭಾಗವಹಿಸುವರು.

ಕುಂಬಳೆ ಉಪಜಿಲ್ಲಾ ಮಹಾಸಭೆ.
 
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು,  ಇದರ ಕುಂಬಳೆ ಉಪಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು. ಅಧ್ಯಕ್ಷೆ  ಶ್ರೀಮತಿ.ಜ್ಯೋತಿ. ಕೆ ಮುಖ್ಯೋಪಾಧ್ಯಾಯರು ಎ.ಎಲ್.ಪಿ.ಶಾಲೆ ಪಣಿಯೆ. ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ  ಡಿ.ಬಿ. ಅಧ್ಯಾಪಕರು ಎ.ಎಲ್.ಪಿ.ಶಾಲೆ ಕಿಳಿಂಗಾರು. ಕೋಶಾಧಿಕಾರಿ ಶ್ರೀ ಅಧ್ಯಾಪಕರು ವಿ.ಎ.ಎಲ್.ಪಿ.ಶಾಲೆ ಉಕ್ಕಿನಡ್ಕ. ಆಯ್ಕೆಯಾದರು. 
 ಅಧ್ಯಕ್ಷೆ  ಶ್ರೀಮತಿ.ಜ್ಯೋತಿ. ಕೆ
 ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ  ಡಿ.ಬಿ.

ಕಿರಣ ಶಂಕರ ಕೆ.ಎಸ್

Monday, 3 August 2015

ಮಂಜೇಶ್ವರ ಉಪಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ರವೀಂದ್ರನಾಥ ಬಲ್ಲಾಳ್ ಇವರಿಗೆ ಮತ್ತು ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀ ಅಶೋಕ್ ಕುಮಾರ್ ಕೊಡ್ಲಮೊಗರು ಮತ್ತು ಖಜಾಂಜಿಯಾಗಿ ಆಯ್ಕೆಯಾದ ಜಯಪ್ರಶಾಂತ್ ಇವರಿಗೆ ಅಭಿನಂದನೆಗಳು.
ರವೀಂದ್ರನಾಥ ಬಲ್ಲಾಳ್ ಅಧ್ಯಕ್ಷರು, 
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಮಂಜೇಶ್ವರ ಘಟಕ
ಅಶೋಕ್ ಕುಮಾರ್ ಕಾರ್ಯದರ್ಶಿ 
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಮಂಜೇಶ್ವರ ಘಟಕ