FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Monday, 21 September 2015


21-09-2015.
ಕನ್ನಡ ಅಧ್ಯಾಪಕ ಸಂಘದ ವತಿಯಿಂದ ಪದಾಧಿಕಾರಿಗಳಿಗೆ ಬಲವರ್ಧನೆಯ ಶಿಬಿರ ಅನಿವಾರ್ಯ- ಇ ವೇಣುಗೋಪಾಲನ್. ಜಿಲ್ಲಾ ಶಿಕ್ಷಣಾಧಿಕಾರಿ.  
ಕಾಸರಗೋಡು, ಕನ್ನಡ ಅಧ್ಯಾಪಕ ಸಂಘದ ಸದಸ್ಯರೆಲ್ಲರೂ ಸಂಘಟನೆಯ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಿಸಿ ಪ್ರಚಲಿತ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು. ಶೈಕ್ಷಣಿಕ ವಿಚಾರಗಳಾಗಲಿ, ಆಡಳಿತಾತ್ಮಕ ವಿಚಾರಗಳಾಗಲಿ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಪ್ರತ್ಯೇಕ ಪರಿಗಣನೆ ಇದ್ದೇ ಇದೆ. ಆದರೆ ಅವುಗಳ ಕೊಡು ಕೊಳ್ಳುವಿಕೆಯಲ್ಲಿ ಅರಿವಿನ ಕೊರತೆಯು ತೊಡಕಾಗಿದೆ. ಇದಕ್ಕಾಗಿ ಅಧ್ಯಾಪಕರ ಸಂಘವು ಸಂಘಟನೆಯ ಸದಸ್ಯರಿಗೆ ಶಿಬಿರಗಳನ್ನು ಕಡ್ಡಾಯಗೊಳಿಸಿ ಬಲವರ್ಧನೆ ಮಾಡಬೇಕು. ಕೇರಳದ ರಾಜಕೀಯ ಬೆಂಬಲಿತ ಸಂಘಟನೆಗಳಲ್ಲಿ ಇದು ನಡೆಯುತ್ತಿದ್ದು ಇದನ್ನು ನಾವೂ ಅನುಕರಸಿ ನಮ್ಮ ಸಂಘಟನೆಯನ್ನು ಬಲಪಡಿಸಬೇಕು ಎ೦ದು ಕಾಸರಗೋಡು ಶೈಕ್ಷಣಿಕ ಜಿಲ್ಲಾ ಶಿಕ್ಷಣಾಧಿಕಾರಿ ಇ ವೇಣುಗೋಪಾಲನ್ ನುಡಿದರು. ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರಾಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್ ವಹಿಸಿದ್ದರು. ಉಪಾಧ್ಯಕ್ಷರುಗಳಾದ ಕೆ.ವಿ.ಸತ್ಯನಾರಾಯಣ ರಾವ್, ಡಾ.ರತ್ನಾಕರ ಮಲ್ಲಮೂಲೆ, ಖಜಾಂಜಿ ಪದ್ಮಾವತಿ ಎ೦ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ ಸುಕೇಶ್ ಎ ವಂದಿಸಿದರು ಪುರುಷೋತ್ತಮ ಕುಲಾಲ್ ನಿರೂಪಿಸಿದರು.
ನಂತರ ವರದಿ ವಾಚನ, ಲೆಕ್ಕಪತ್ರ ಮಂಡನೆ, ಸದಸ್ಯರಿಂದ ಚರ್ಚೆ, ಕ್ರೋಡೀಕರಣ ನಡೆಯಿತು. ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಮಹಾಲಿಂಗೇಶ್ವರ ಭಟ್ ಎ೦.ವಿ.ಮುಖ್ಯ ಶಿಕ್ಷಕರು, ಝಡ್. ಎ.ಎಲ್.ಪಿ.ಎಸ್. ಕುಂಜಾರು, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಮುಖ್ಯ ಶಿಕ್ಷಕರು,ಜಿ.ಎಲ್.ಎಸ್ ಮಾಣಿಮೂಲೆ, ಖಜಾಂಜಿ ಸುಕೇಶ ಎ ಜಿ.ಯು.ಪಿ.ಎಸ್. ಮೂಡಂಬೈಲು, ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಜಿ.ಎಚ್.ಎಸ್.ಎಸ್. ಅಂಗಡಿಮೊಗರು, ಉಪಾಧ್ಯಕ್ಷರುಗಳಾಗಿ ಕೆ.ವಿ.ಸತ್ಯನಾರಾಯಣ ರಾವ್ ಮುಖ್ಯ ಶಿಕ್ಷಕರು, ಜಿ.ಎಚ್.ಎಸ್.ಸೂರಂಬೈಲು ಮತ್ತು ಕೆ.ಸತ್ಯನಾರಾಯಣ ಭಟ್ ಮುಖ್ಯ ಶಿಕ್ಷಕರು ಎ.ಯು.ಪಿ.ಎಸ್. ಆನೆಕಲ್ಲು, ಜತೆ ಕಾರ್ಯದರ್ಶಿಗಳಾಗಿ ಪ್ರಭಾವತಿ ಕೆದಿಲ್ಲಾಯ ಎನ್.ಎಚ್.ಎಸ್.ಪೆರಡಾಲ ಮತ್ತು ಉಮೇಶ ಕೆ ಮುಖ್ಯ ಶಿಕ್ಷಕರು ವಿ.ಎ.ಎಲ್.ಪಿ.ಎಸ್ ಬೆರಿಪದವು, ಅಧಿಕೃತ ವಕ್ತಾರ ವಿಶಾಲಾಕ್ಷ ಪುತ್ರಕಳ ಎಸ್.ಜಿ.ಕೆ.ಎಚ್.ಎಸ್.ಕೂಡ್ಲು, ಲೆಕ್ಕಪರಿಶೋಧಕರಾಗಿ ಡಿ.ಮಹಾಲಿಂಗೇಶ್ವರ ರಾಜ್ ಜಿಲ್ಲಾ ಶಿಕ್ಷಣಾಧಿಕಾರಿ ಕಾಞ್ಞಂಗಾಡು ಮತ್ತು ಬಿ.ಸೂರ್ಯನಾರಾಯಣ ಮುಖ್ಯ ಶಿಕ್ಷಕರು ಎ.ಎಲ್.ಪಿ.ಎಸ್. ಬೆಳಿಂಜೆ ಆಯ್ಕೆಯಾದರು.

Tuesday, 15 September 2015


ಅಧ್ಯಕ್ಷರುಃ ಸುಭಾಷ್ ಚಂದ್ರ ಎಂ.ಕೆ.
ಕಾರ್ಯದರ್ಶಿಃ ನವೀನ್ ಕುಮಾರ್
ಖಜಾಂಜಿಃ ಬಾಬು,ಕೆ.

Sunday, 16 August 2015


16-08-2015
ಕಯ್ಯಾರರ ದಾರಿದೀಪ ನಮ್ಮ ಕತ್ತಲೆಯನ್ನು ಹೋಗಲಾಡಿಸಲಿ.
 
ಶತಮಾನ ಕಂಡ ಶತಾಯುಷಿ ನಾಡೋಜ ಡಾ/ ಕಯ್ಯಾರ ಕಿಞ್ಞಣ್ಣ ರೈ ಇವರು ಅಪ್ರತಿಮ ಹೋರಾಟಗಾರು, ಅನ್ಯಾಯವನ್ನು ಎದುರಿಸುವಲ್ಲಿ ಅವರ ದಿಟ್ಟತನ ಎಲ್ಲರಿಗೂ ಮಾದರಿಯಾದುದು.ಬಹು ಭಾಷಾ ಪಂಡಿತರೂ ಆದರ್ಶ ಶಿಕ್ಷಕರೂ ಆದ ಇವರ ಸಾಧನೆ ಅಪಾರ. ಕಾಸರಗೋಡು ಕನ್ನಡಿಗರ ಮುಖ್ಯ ಧ್ವನಿಯೆಂದೇ ಗುರುತಿಸಲ್ಪಟ್ಟ ಇವರ ಮಾರ್ಗದರ್ಶನ ಯುವಜನಾಂಗಕ್ಕೆ ದಾರಿದೀಪವಾಗಿದೆ, ಎ೦ದು ಎಸ್.ವಿ.ಭಟ್ ಅಧ್ಯಕ್ಷರು ಕ.ಸಾ.ಪ.ಕಾಸರಗೋಡು ಘಟಕ ಇವರು ನುಡಿದರು. ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಜರಗಿದ ಕಯ್ಯಾರಿಗೆ ನುಡಿನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಿವೃತ್ತ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ.ಪುಂಡರೀಕಾಕ್ಷ ಆಚಾರ್ಯ, ನಿವೃತ್ತ ಮುಖ್ಯ ಶಿಕ್ಷಕ ಸತೀಷ ಕೆ, ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕಳ ಮೊದಲಾದವರು ಅಧ್ಯಾಪಕ ಸಂಘದ ನುಡಿನಮನ ಸಲ್ಲಿಸಿ ಶ್ರೀಯುತರನ್ನು ಸ್ಮರಿಸಿದರು. ಕಾಸರಗೋಡು ಘಟಕದ ಅಧ್ಯಕ್ಷರಾದ ರಾಜೇಶ್ವರ ಸಿ.ಎಚ್. ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಪುಷ್ಪಾವತಿ ವಂದಿಸಿದರು.ಸುಭಾಷ್ ಕಾರ್ಯಕ್ರಮ ನಿರೂಪಿಸಿದರು.

Thursday, 13 August 2015

-->
-->
ಕಯ್ಯಾರರಿಗೆ ಕನ್ನಡ ಅಧ್ಯಾಪಕರಿಂದ ನುಡಿನಮನ
ಪ್ರಿಯರೇ,
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ನಾಡೋಜ ಡಾ/ ಕಯ್ಯಾರ ಕಿಞ್ಞಣ್ಣ ರೈಯವರಿಗೆ ನುಡಿನಮನ ಕಾರ್ಯಕ್ರಮವು ಇದೇ ಬರುವ ದಿನಾಂಕ 16-06-2015 ನೇ ರವಿವಾರ ಬೆಳಗ್ಗೆ 10.00 ಗಂಟೆಗೆ ಸರಿಯಾಗಿ ಕಾಸರಗೋಡು ಬೀರಂತಬೈಲಿನಲ್ಲಿರುವ ಅಧ್ಯಾಪಕ ಭವನ ದಲ್ಲಿ ಜರಗಲಿದೆ. ಎಲ್ಲಾ ಶಿಕ್ಷಕ ಬಂಧುಗಳು ಈ ಸಭೆಯಲ್ಲಿ ಹಾಜರಿದ್ದು ಶ್ರೀಯುತರ ಸ್ಮರಣಾಂಜಲಿಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ. ಆ ಬಳಿಕ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕಾಸರಗೋಡು, ಬೇಕಲ- ಹೊಸದುರ್ಗ ಉಪಜಿಲ್ಲಾ ಸಮಾವೇಶವು ಜರಗಲಿದೆ.

14-08-2015
ಅಗೋಸ್ತು 26 ರಂದು ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ.
ಕರ್ನಾಟಕ ಸರಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹೊರರಾಜ್ಯ ಕೇರಳ ಹಾಗೂ ಗೋವಾ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವು ಅಗೋಸ್ತು 26 ರಂದು ಕಾಸರಗೋಡಿನ ನಗರಸಭೆ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯ ವಿವಿಧ ಶಾಲೆಗಳಿಂದ ಎ೦ಭತ್ತಮೂರು ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಡಾ/ ಹನುಮಂತಯ್ಯ, ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಸ್ಥಳೀಯ ಶಾಸಕರು, ಪಿ.ಎಸ್.ಮೊಹಮ್ಮದ್ ಸಗೀರ್ ಜಿಲ್ಲಾಧಿಕಾರಿ, ಡಾ/ಶ್ರೀನಿವಾಸ್ ಎ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ. ಇ.ವೇಣುಗೋಪಾಲನ್, ಜಿಲ್ಲಾ ಶಿಕ್ಷಣಾಧಿಕಾರಿಗಳು. ಕಾಸರಗೋಡು,ಮುರಳೀಧರ ಬಳ್ಳುಕುರಾಯ ಅಧ್ಯಕ್ಷರು ಕರ್ನಾಟಕ ಸಮಿತಿ ಕಾಸರಗೋಡು, ಟಿ.ಡಿ.ಸದಾಶಿವ ರಾವ್ . ಅಧ್ಯಕ್ಷರು ಕೇರಳ ಪ್ರಾಂತ್ಯಕನ್ನಡ ಮಾಧ್ಯಮ ಅಧ್ಯಾಪಕ ಸಂಘ, ಕಾಸರಗೋಡು.ಎಸ್.ವಿ.ಭಟ್, ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಗಡಿನಾಡ ಘಟಕ, ಜಯರಾಂ ಎಡನೀರು ಅಧ್ಯಕ್ಷರು. ಪಾರ್ತಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರ ಕೇರಳ ಸರಕಾರ,ನ್ಯಾಯವಾದಿ ಎ.ಸುಬ್ಬಯ್ಯ ರೈ.ಅಧ್ಯಕ್ಷರು ತುಳು ಅಕಾಡಮಿ ಕೇರಳ ಸರಕಾರ ಮತ್ತು ಕನ್ನಡದ ಪ್ರಸಿದ್ಧ ಸಾಹಿತಿಗಳು, ಶಿಕ್ಷಣ ತಜ್ಞರು ಭಾಗವಹಿಸುವರು.

ಕುಂಬಳೆ ಉಪಜಿಲ್ಲಾ ಮಹಾಸಭೆ.
 
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು,  ಇದರ ಕುಂಬಳೆ ಉಪಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು. ಅಧ್ಯಕ್ಷೆ  ಶ್ರೀಮತಿ.ಜ್ಯೋತಿ. ಕೆ ಮುಖ್ಯೋಪಾಧ್ಯಾಯರು ಎ.ಎಲ್.ಪಿ.ಶಾಲೆ ಪಣಿಯೆ. ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ  ಡಿ.ಬಿ. ಅಧ್ಯಾಪಕರು ಎ.ಎಲ್.ಪಿ.ಶಾಲೆ ಕಿಳಿಂಗಾರು. ಕೋಶಾಧಿಕಾರಿ ಶ್ರೀ ಅಧ್ಯಾಪಕರು ವಿ.ಎ.ಎಲ್.ಪಿ.ಶಾಲೆ ಉಕ್ಕಿನಡ್ಕ. ಆಯ್ಕೆಯಾದರು. 
 ಅಧ್ಯಕ್ಷೆ  ಶ್ರೀಮತಿ.ಜ್ಯೋತಿ. ಕೆ
 ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ  ಡಿ.ಬಿ.

ಕಿರಣ ಶಂಕರ ಕೆ.ಎಸ್

Monday, 3 August 2015

ಮಂಜೇಶ್ವರ ಉಪಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ರವೀಂದ್ರನಾಥ ಬಲ್ಲಾಳ್ ಇವರಿಗೆ ಮತ್ತು ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀ ಅಶೋಕ್ ಕುಮಾರ್ ಕೊಡ್ಲಮೊಗರು ಮತ್ತು ಖಜಾಂಜಿಯಾಗಿ ಆಯ್ಕೆಯಾದ ಜಯಪ್ರಶಾಂತ್ ಇವರಿಗೆ ಅಭಿನಂದನೆಗಳು.
ರವೀಂದ್ರನಾಥ ಬಲ್ಲಾಳ್ ಅಧ್ಯಕ್ಷರು, 
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಮಂಜೇಶ್ವರ ಘಟಕ
ಅಶೋಕ್ ಕುಮಾರ್ ಕಾರ್ಯದರ್ಶಿ 
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಮಂಜೇಶ್ವರ ಘಟಕ
01-08-2015
ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ.
 
ಮಂಜೇಶ್ವರ : ಒಂದು ಹಣತೆ ತಾನು ಎಷ್ಟು ಬೆಳಗಬಲ್ಲೆನೋ ಅಷ್ಟು ಕರ್ತವ್ಯ ತನ್ನಿಂದಾಗಲಿ ಎಂದೆಣಿಸಿ ಬೆಳಗಿ ,ಅಸಂಖ್ಯಾತ ಹಣತೆಗಳು ಒಟ್ಟಾದಾಗ ಇಡೀ  ಪರಿಸರವನ್ನು ಬೆಳಗುವಂತೆ ಮಾಡುತ್ತವೆ. ಅಂತೆಯೇ ಕಾಸರಗೋಡು ಕನ್ನಡಿಗರು ಇಲ್ಲಿನ ಭಾಷಾ ಸಂಬಂಧಿ ಸಮಸ್ಯೆಗಳಿಗೆ ಧೃತಿಗೆಡದೆ ಕನ್ನಡ ಭಾಷೆ, ಸಂಸ್ಕೃತಿಯನ್ನ ಉಳಿಸಲು ಅಳಿಲ  ಸೇವೆ ಮಾಡಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಅಧ್ಯಾಪಕರು ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಮಂಗಳೂರು ವಿ.ವಿ. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರೂ, ಖ್ಯಾತ ಹಾಸ್ಯ ಲೇಖಕಿಯಾದ ಶ್ರೀಮತಿ ಪ್ರೊ. ಭುವನೇಶ್ವರಿ ಹೆಗಡೆ ನುಡಿದರು. ಇವರು ಸರಕಾರಿ ಪ್ರೌಢ ಶಾಲೆ ಉದ್ಯಾವರದಲ್ಲಿ ಜರಗಿದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ(ರಿ.) ಕಾಸರಗೋಡು ಇದರ ಮಂಜೇಶ್ವರ ಉಪಜಿಲ್ಲಾ ಘಟಕದ ಮಹಾಸಭೆಯನ್ನು ಉದ್ಘಾಟಿಸಿ ನುಡಿದರು. 
       ಮಂಜೇಶ್ವರ ಘಟಕದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ರಾವ್ ಪಿ ಬಿ. ಇವರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಭೆಯಲ್ಲಿ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಶ್ರೀ. ಇ.ವೇಣುಗೋಪಾಲ್ , ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಎನ್. ಮುಖ್ಯ ಅತಿಥಿಗಳಾಗಿದ್ದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅದ್ಯಾಪಕ ಸಂಘದ ಅಧ್ಯಕ್ಷ ಶ್ರೀ. ಟಿ.ಡಿ. ಸದಾಶಿವ ರಾವ್, ಉಪಾಧ್ಯಕ್ಷ ಶ್ರೀ ಮಹಾಲಿಂಗೇಶ್ವರ ಭಟ್ , ಕೋಶಾಧಿಕಾರಿ ಶ್ರೀಮತಿ ಪದ್ಮಾವತಿ ಯಂ. ,ಮಂಜೇಶ್ವರ ಉಪಜಿಲ್ಲಾ ಕೋಶಾಧಿಕಾರಿ ಶ್ರೀ. ಭಾಸ್ಕರ ಎಸ್. , ಉದ್ಯಾವರ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇವತಿ ಉಪಸ್ಥಿತರಿದ್ದರು. 
      ಉಪಜಿಲ್ಲಾ ಕಾರ್ಯದರ್ಶಿ ಶ್ರೀ. ಅಶೋಕ್ ಕೆ. ಸ್ವಾಗತಿ,ಶ್ರೀ ಉಮೇಶ್ ಕೆ. ವಂದಿಸಿದ ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಉಪಜಿಲ್ಲಾ ಜೊತೆ ಕಾರ್ಯದರ್ಶಿ ಶ್ರೀ. ಜಯಪ್ರಶಾಂತ್ ನಡೆಸಿದರು. ಬಳಿಕ ಮುಂದಿನ ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. 





Sunday, 26 July 2015


-->
26-07-2015
ಅಧ್ಯಾಪಕ ಧ್ವನಿ ಕನ್ನಡಿಗರಿಗೆ ದಾರಿದೀಪವಾಗಲಿ-ಎಸ್.ವಿ.ಭಟ್.
 ಕಾಸರಗೋಡು. ಜು.25, ಕಾಸರಗೋಡಿನಲ್ಲಿ ಕನ್ನಡಿಗರು ಒಗ್ಗಟ್ಟಿನಿಂದ ಸಮಸ್ಯೆಗಳನ್ನು ಎದುರಿಸುವ ಅನಿವಾರ್ಯತೆ ಇದೆ. ಶಿಕ್ಷಣ ಕ್ಷೇತ್ರದಿಂದ ಹಿಡಿದು ಎಲ್ಲಾ ಔದ್ಯೋಗಿಕ ವಲಯಗಳಲ್ಲಿಯೂ ನಮ್ಮ ಸ್ವಂತಿಕೆಯನ್ನು ಪ್ರತಿಬಿಂಬಿಸಲು ನಮ್ಮ ಕನ್ನಡ ಸಂಘಟನೆಗಳು ಸಮರ್ಥವಾಗಿದೆ. ಈ ನಿಟ್ಟಿನಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘವು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿದೆ ಎ೦ದು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಇದರ ಅಧ್ಯಕ್ಷರಾದ ಎಸ್.ವಿ.ಭಟ್ ನುಡಿದರು. ಅವರು ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ಜರಗಿದ ಅಧ್ಯಾಪಕ ಧ್ವನಿ ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ನಗರದ ಬೀರಂತಬೈಲಿನ ಕನ್ನಡ ಅಧ್ಯಾಪಕ ಭವನದಲ್ಲಿ ಸಂಘಟನೆಯ ಮುಖವಾಣಿ ಅಧ್ಯಾಪಕ ಧ್ವನಿ ಬಿಡಗಡೆ ಸಮಾರಂಭ ಏರ್ಪಡಿಸಲಾಗಿತ್ತು. ಅಧ್ಯಾಪಕ ಧ್ವನಿ ಬಿಡುಗಡೆಯ ಬಳಿಕ ಕಾಸರಗೋಡು ಶೈಕ್ಷಣಿಕ ಜಿಲ್ಲಾಧಿಕಾರಿಯಾಗಿ ಭಡ್ತಿಗೊಂಡ ಇ.ವೇಣುಗೋಪಾಲನ್ , ಕೊಟ್ಟಾರಕರ ಶೈಕ್ಷಣಿಕ ಜಿಲ್ಲಾಧಿಕಾರಿಯಾಗಿಭಡ್ತಿ ಹೊಂದಿದ ಡಿ.ಮಹಾಲಿಂಗೇಶ್ವರ ರಾಜ್ ಮತ್ತು ಡಾಕ್ಟರೇಟ್ ಗಳಿಸಿದ ಹಿರಿಯ ಶಿಕ್ಷಕರಾದ ಶಶಿರಾಜ ನೀಲಂಗಳ ಅಭಿನಂದನೆ ಸಲ್ಲಿಸಲಾಯಿತು. ಪ್ರೊ/ವಾಸುದೇವ ಚಾಪಾಡಿ ಪ್ರಾಯೋಜಿತ ವಿದ್ಯಾರ್ಥಿ ಪ್ರಶಸ್ತಿಯನ್ನು ಕು/ಪ್ರಥಮ್, ಜಿ.ಎಫ್.ಎಚ್.ಎಸ್.ಎಸ್.ಬೇಕಲ್ ಮತ್ತು ಕು/ದಿವ್ಯಶ್ರೀ ಪಿ. ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕಂಡರಿ ಶಾಲೆ ನೀರ್ಚಾಲು ಇವರಿಗೆ ನೀಡಲಾಯಿತು. ಹರ್ಷವರ್ಧನ ಭಟ್ ಸರ್ಪಂಗಳ ಸ್ಮಾರಕ ಪ್ರಶಸ್ತಿಯನ್ನು ಕು/ಕಾವ್ಯ ಜಿ., ಶ್ರೀ ಶಾರದಾಂಬಾ ಹೈಯರ್ ಸೆಕಂಡರಿ ಶಾಲೆ ಶೇಣಿ ಇವರಿಗೆ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್ ವಹಿಸಿದ್ದರು. ಕೆ.ಪಿ.ಎಚ್.ಎಸ್.ಎ. ರಾಜ್ಯಾಧ್ಯಕ್ಷರಾದ ರವೀಂದ್ರನಾಥ್ ನಾಯಕ್, ಶಿಕ್ಷಣ ಇಲಾಖೆಯ ಉದ್ಯೋಗಸ್ಥರು ಮತ್ತು ಕನ್ನಡ ಅಧ್ಯಾಪಕರ ಸಂಯುಕ್ತ ಸಂಘಟನೆಯ ಅಧ್ಯಕ್ಷರಾದ ಅರವಿಂದ ಕುಮಾರ್, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸ ಮೂರ್ತಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಂಕರ್ ಸಾರಡ್ಕ ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಖಜಾಂಜಿ ಪದ್ಮಾವತಿ ಎ೦. ವಂದಿಸಿದರು. ಬಾಬು ಕೆ ಕಾರ್ಯಕ್ರಮ ನಿರ್ವಹಿಸಿದರು.