FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Friday, 27 February 2015

27-02-2015
08-03-2015 ಆದಿತ್ಯವಾರ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಡೆಸಲುದ್ದೇಶಿಸಿದ ಕನ್ನಡ ಮಾಧ್ಯಮ ಪ್ರಶಸ್ತಿಯು ಕೇರಳ ರಾಜ್ಯದ ಕನ್ನಡ ವಿದ್ಯಾರ್ಥಿಗಳಿಗೆ ಪ್ರಾತಿನಿಧಿಕ ಪ್ರೋತ್ಸಾಹವಾಗಿದೆ .ಆದುದರಿಂದ ಇದಕ್ಕೆ ಅರ್ಹರಾದ ಎಲ್ಲಾ ಮಕ್ಕಳು, ಅವರ ಪೋಷಕರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎ೦ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಲ್. ಹನುಮಂತಯ್ಯನವರು ಕರೆ ನೀಡಿದ್ದಾರೆ.. ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗಳಿಸಿದ ಮಕ್ಕಳು ಇದಕ್ಕೆ ಅರ್ಹರಾಗಿರುತ್ತಾರೆ.ಇದಲ್ಲದೆ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯನ್ನತ ಗ್ರೇಡ್ ಗಳಿಸಿದ ಮಕ್ಕಳನ್ನು ಪುರಸ್ಕರಿಸಲಾಗುವುದು. ಈ ಕಾರ್ಯಕ್ರಮವು ದಿನಾಂಕ 08-03-2015 ನೇ ಆದಿತ್ಯವಾರ ಕಾಸರಗೋಡಿನ ಮುನ್ಸಿಪಲ್ ಕಾನ್ಫೆರನ್ಸ್ ಹಾಲಿನಲ್ಲಿ ನಡೆಯಲಿದೆ . ಸ್ಥಳೀಯ ಶಾಸಕರು, ಡಿ.ಪಿ.ಐ.ಸಹಿತ ಉನ್ನತ ಶೈಕ್ಷಣಿಕ ಅಧಿಕಾರಿಗಳು, ಶಿಕ್ಷಣ ತಜ್ಞರು ಮತ್ತು ನಾಡಿನ ಗಣ್ಯರು ಭಾಗವಹಿಸಲಿದ್ದಾರೆ.ತಾವು ದಯವಿಟ್ಟು ನಿಮ್ಮ ಶಾಲೆಯಲ್ಲಿ ಕಲಿತು ಇದಕ್ಕೆ ಅರ್ಹರಾದ ಎಲ್ಲಾ ಮಕ್ಕಳಿಗೂ ಮುಖತಾ ಅಥವಾ ದೂರವಾಣಿಯ ಮೂಲಕ ಸಂಪರ್ಕಿಸಿ ಅವರು ಮತ್ತು ಅವರ ರಕ್ಷಕರೂ ಇದರಲ್ಲಿ ಭಾಗವಹಿಸುವಂತೆ ಮಾಡಬೇಕಾಗಿ ಈ ಮೂಲಕ ವಿನಂತಿಸುತ್ತಿದ್ದೇವೆ.ಮಕ್ಕಳ ಪಟ್ಟಿಯನ್ನು ಲಗತ್ತಿಸಿರುತ್ತೇವೆ.

2013-,14 ನೇ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ.ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ+ -
ಕ್ರ.ಸಂ
ವಿದ್ಯಾರ್ಥಿಯ ಹೆಸರು
ಶಾಲೆ
1
ಮಯೂರ ಯಸ್.
ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲು
2
ವೀಕ್ಷಿತ ಜೆ.ಆರ್.
ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲು
3
ಪೃಥ್ವಿ ಕೆ
ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲು
4
ದೀಪಕ್ ಎಸ್.ಯನ್.
ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲು
5
ಶ್ರೀವತ್ಸ ಕೆ.
ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲು
6
ಶ್ರವಣಕುಮಾರ್ ಪಿ.
ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲು
7
ಯತಿಕ್ ರಾಜ್ ಆಚಾರ್ಯ.ಎ೦
ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲು
8
ಸುದರ್ಶನ ಕಲ್ಲೂರಾಯ ಎ೦
ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲು
9
ಜೀವಿತ ಕೆ.
ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಕೂಡ್ಲು
10
ಚಿನ್ಮಯಿ ಟಿ.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
11
ಅಪೂರ್ವ ಪಿ.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
12
ಸುಶ್ಮಿಕಾ ಪಿ ಆರ್.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
13
ಶಲ್ಮಾ ಜೋಸ್ಲಿನ್ ಮೊಂತೇರೊ.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
14
ದೀಪಕ್ ಕೃಷ್ಣ ಎ೦.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
15
ದಿಲೀಪ್ ಎ೦.
ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆ ಅಗಲ್ಪಾಡಿ.
16
ಅಶ್ವಿನಿ ಕೆ.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆ ಪೆರಡಾಲ ನೀರ್ಚಾಲು.
17
ಆದರ್ಶ ಎಚ್.ಎ.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆ ಪೆರಡಾಲ ನೀರ್ಚಾಲು.
18
ಅರವಿಂದ ಎಸ್.ವಿ.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆ ಪೆರಡಾಲ ನೀರ್ಚಾಲು.
19
ಶ್ರೀಶ ಕೆ
ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆ ಪೆರಡಾಲ ನೀರ್ಚಾಲು.
20
ಶ್ರೀವಿದ್ಯಾ ಯಸ್.
ಬಿ.ಇ.ಎ೦.ಎಚ್.ಎಸ್.ಎಸ್.ಕಾಸರಗೋಡು.
21
ಮನಿಷಾ ಡಿ.
ಬಿ.ಇ.ಎ೦.ಎಚ್.ಎಸ್.ಎಸ್.ಕಾಸರಗೋಡು.
22
ಸ್ಪರ್ಶ ಪಿ.
ಬಿ.ಇ.ಎ೦.ಎಚ್.ಎಸ್.ಎಸ್.ಕಾಸರಗೋಡು.
23
ವರ್ಷಾ ಕೆ.ವಿ.
ಬಿ.ಇ.ಎ೦.ಎಚ್.ಎಸ್.ಎಸ್.ಕಾಸರಗೋಡು.
24
ಅಭಿಷೇಕ್ ಎಸ್ ಮಯ್ಯ.
ಜಿ.ಎಚ್.ಎಸ್.ಎಸ್.ಕುಂಬಳೆ.
25
ಹರ್ಷಿತಾ ಕೆ.ಜಿ.
ಜಿ.ಎಚ್.ಎಸ್.ಎಸ್.ಕುಂಬಳೆ.
26
ನಿಕ್ಷಿತಾ ಎ೦
ಜಿ.ಎಚ್.ಎಸ್.ಎಸ್.ಕುಂಬಳೆ.
27
ಅನೂಪ್ ಜೆ.
ಜಿ.ಎಚ್.ಎಸ್.ಎಸ್.ಪೈವಳಿಕೆ ನಗರ.
28
ಚೇತನ್ ಪಿ.
ಜಿ.ಎಚ್.ಎಸ್.ಎಸ್.ಪೈವಳಿಕೆ ನಗರ.
29
ಪ್ರವೀಣ್ ರಾಜ್ ಪಿ.
ಜಿ.ಎಚ್.ಎಸ್.ಎಸ್.ಪೈವಳಿಕೆ ನಗರ.
30
ಶಂಕರ ಶರ್ಮ ಎಸ್.
ಎಸ್.ಎಸ್.ಎಚ್.ಎಸ್.ಎಸ್.ಕಾಟುಕುಕ್ಕೆ..
31
ನಿಖೇತ್ ಪಿ.ಎಸ್.
ಎಸ್.ಎಸ್.ಎಚ್.ಎಸ್.ಎಸ್.ಕಾಟುಕುಕ್ಕೆ..
32
ಸುಭಿಕ್ಷಾ ಕೆ.ಬಿ.
ಕೆ.ವಿ.ಎಸ್.ಎ೦.ಪ್ರೌಢ ಶಾಲೆ ಕುರುಡಪದವು.
33
ಈಶ್ವರಿ ಯಮ್.
ಕೆ.ವಿ.ಎಸ್.ಎ೦.ಪ್ರೌಢ ಶಾಲೆ ಕುರುಡಪದವು.
34
ನಿಖಿಲ್ ಬಿ.
ಜಿ.ಎಚ್.ಎಸ್. ಉದ್ಯಾವರ.
35
ತೇಜಸ್ವಿನಿ ಬಿ.
ಜಿ.ಎಚ್.ಎಸ್. ಉದ್ಯಾವರ.
36
ಪಂಚಮಿ ಎನ್.
ಎಸ್ ಡಿ ಪಿ ಎಚ್ ಎಸ್ ಧರ್ಮತ್ತಡ್ಕ.
37
ಗಾಯತ್ರಿ ಬಿ.ಎಸ್.
ಜಿ.ಎಚ್.ಎಸ್.ಎಸ್. ಬಂದಡ್ಕ.
38
ಶುಭಾ ಎಸ್ ಭಟ್.
ಎಚ್.ಎಸ್.ಐ.ಬಿ.ಎಸ್.ಎಚ್.ಎಸ್.ಎಡನೀರು.
39
ಧನ್ಯಶ್ರೀ.
ಜಿ.ಎಚ್.ಎಸ್.ಬೇಕೂರು.
40
ರವಿಗಣೇಶ್ ಎ೦.
ಜಿ.ಎಚ್.ಎಸ್.ಅಡೂರು.
41
ಶ್ರದ್ಧಾ ಎನ್.
ಜಿ.ಎಚ್.ಎಸ್.ಎಸ್.ಪೈವಳಿಕೆ.
42
ಅಪೂರ್ವ ಕೆ.
ಜಿ.ಎಚ್.ಎಸ್.ಎಸ್.ಪೈವಳಿಕೆ.
43
ಫರ್ಝಾನ
ಜಿ.ಎಫ್.ಎಚ್.ಎಸ್.ಬೇಕಲ
44
ರೂಪಶ್ರೀ ಜಿ.
ಜಿ.ಎಫ್.ಎಚ್.ಎಸ್.ಬೇಕಲ
45
ಶ್ರುತಿ ಜೆ.
ಜಿ.ಎಫ್.ಎಚ್.ಎಸ್.ಬೇಕಲ
46
ಪೂಜಾ ಸಿ.ಎಚ್.
ಜಿ.ವಿ.ಎಚ್.ಎಸ್.ದೇಲಂಪಾಡಿ.























2013-,14 ನೇ ಸಾಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ.ತರಗತಿಯಲ್ಲಿ ಶಾಲೆಯಲ್ಲಿ ಉನ್ನತ ಅಂಕ ಗಳಿಸಿದವರು.-
ಕ್ರ.ಸಂ
ವಿದ್ಯಾರ್ಥಿಯ ಹೆಸರು
ಶಾಲೆ
1
ಆಕಾಶ್ ಕೆ.
ಜಿ.ವಿ.ಎಚ್.ಎಸ್.ಎಸ್.ಮುಳ್ಳೇರಿಯಾ
2
ಅಕ್ಷತ ಕೆ.
ಜಿ.ವಿ.ಎಚ್.ಎಸ್.ಎಸ್.ಮುಳ್ಳೇರಿಯಾ
3
ಶ್ವೇತಾ ಸಿ.ಎಚ್.
ಜಿ.ವಿ.ಎಚ್.ಎಸ್.ಎಸ್.ಮುಳ್ಳೇರಿಯಾ
4
ರಕ್ಷಾ ಎ.
ಜಿ.ಎಚ್.ಎಸ್.ಎಸ್. ಬೆಳ್ಳೂರು.
5
ವೈಶಾಲಿ ಜಿ.ಪಿ.
ಜಿ.ಎಚ್.ಎಸ್.ಎಸ್. ಬೆಳ್ಳೂರು.
6
ತ್ಯಾಗಶ್ರೀ ಜಿ.
ಜಿ.ವಿ.ಎಚ್.ಎಸ್.ಎಸ್. ಬಾಲಕಿಯರಿಗಾಗಿ ಕಾಸರಗೋಡು.
7
ಅನುಷ ಪಿ.
ಎಸ್.ಎ.ಟಿ.ಎಚ್.ಎಸ್.ಮಂಜೇಶ್ವರ.
8
ನವ್ಯಶ್ರೀ ಯಂ.ಆರ್.
ಜಿ.ಎಚ್.ಎಸ್.ಎಸ್.ಮೊಗ್ರಾಲ್ ಪುತ್ತೂರು.
9
ಮಧುರ
ಜಿ.ಎಚ್.ಎಸ್.ಎಸ್.ಶಿರಿಯ.
10
ವಿನೂಲ್ ಪ್ರಿಯ ಯಂ.
ಎಸ್.ಎಸ್.ಎಚ್.ಎಸ್ ಶೇಣಿ.
11
ದೀಪ್ತಿ ಸಿ.ಎಚ್.
ಜಿ.ಎಚ್.ಎಸ್.ಎಸ್.ಆದೂರು.
12
ಶ್ರೀ ಕಾರ್ತಿಕ ಕೇಶವ ಐ.
ಎನ್.ಎಚ್.ಎಸ್.ಎಸ್. ಪೆರಡಾಲ.
13
ಶರಣ್ಯ ಎನ್.
ಎನ್.ಎನ್.ಎಚ್.ಎಸ್.ಪೆರ್ಲ.
14
ಕೃಷ್ಣಕಿಶೋರ್ ಎ.
ಜಿ.ಎಚ್.ಎಸ್.ಪೆರಡಾಲ.
15
ಶ್ವೇತಾ ಭಟ್ ಕೆ.
ಬಿ.ಎ.ಆರ್.ಎಚ್.ಎಸ್.ಬೋವಿಕ್ಕಾನ.
16
ರಂಜಿತ್ ಸಿ.
ಜಿ.ಎಚ್.ಎಸ್.ಪಾಂಡಿ.
17
ಯೋಗಿತ ಪಿ.
ಜಿ.ಎಚ್.ಎಸ್.ಎಸ್.ಕುಂಡಂಕುಳಿ.
18
ಅಬ್ದುಲ್ ರಹಿಮಾನ್
ಜಿ.ಎಚ್.ಎಸ್.ಕಡಂಬಾರ್
19
ಪ್ರಸಾದ್.
ಜಿ.ಎಚ್.ಎಸ್.ಎಸ್.ಕಾಸರಗೋಡು.
20
ನೀಷ್ಮಾ ಬಿ.
ಜಿ.ಎಚ್.ಎಸ್.ಎಸ್.ಮಂಗಲ್ಪಾಡಿ.
21
ಅಬ್ದುಲ್ ಸಮದ್ ಡಿ.
ಎಸ್.ವಿ,ವಿ,ಎಚ್.ಎಸ್.ಮೀಯಪದವು.
22
ಸಂಪತ್ ಕುಮಾರ್ ಎ೦.
ಜಿ.ಎಚ್.ಎಸ್.ಮೂಡಂಬೈಲು.
23
ಅಖಿಲೇಶ್ ಎ.ಜಿ.
ಎಸ್.ವಿ.ವಿ.ಎಚ್.ಎಸ್.ಕೊಡ್ಲಮೊಗರು.
24
ಶ್ವೇತ ಕೆ.ಎಸ್.
ಎಸ್.ವಿ.ವಿ.ಎಚ್.ಎಸ್.ಕೊಡ್ಲಮೊಗರು.
25
ಮೊಹಮ್ಮದ್ ಅರ್ಫಾತ್ ಎಸ್.ಪಿ.
ಜಿ.ಎಚ್.ಎಸ್.ಎಸ್.ಉಪ್ಪಳ.
26
ಹಸೀನ ಕೆ.ಎ.
ಜಿ.ಎಚ್.ಎಸ್.ಎಸ್ ಕುಂಜತ್ತೂರು.
27
ಪ್ರಮೋದ್ ಕೆ.ಜಿ.
ಜಿ.ಎಚ್.ಎಸ್.ಎಸ್.ಚಂದ್ರಗಿರಿ.
28
ರಶ್ಮಿತ
ಜಿ.ಎಚ್.ಎಸ್.ಬಂಗ್ರಮಂಜೇಶ್ವರ.
29
ಚಂದನ್ ಎ.
ಜಿ.ಎಚ್.ಎಸ್.ಎಸ್.ಉದುಮ.
30
ಚೇತನ್ ಎ.
ಜಿ.ಎಚ್.ಎಸ್.ಎಸ್.ಉದುಮ.
31
ದಿಲೀಪ್ ಪಿ.
ಜಿ.ಎಚ್.ಎಸ್.ಎಸ್.ಉದುಮ.
32
ಸಂಜು ಚಂದ್ರನ್ ಕೆ.
ಜಿ.ಎಚ್.ಎಸ್.ಎಸ್.ಹೊಸದುರ್ಗ.
33
ಸಹನ ಪಿ.ಎಲ್.
ಜಿ.ಎಚ್.ಎಸ್.ಎಸ್.ಪಡ್ರೆ.
34
ಕಾವ್ಯ ವಿ.
ಜಿ.ಎಚ್.ಎಸ್.ಎಸ್.ಪಳ್ಳಿಕರೆ.
35
ಭವ್ಯ ಲಕ್ಷ್ಮಿ ಜಿ.
ದುರ್ಗಾ ಎಚ್.ಎಸ್.ಎಸ್.ಕಾಞ್ಞಂಗಾಡು.
36
ತೇಜಸ್.
ಜಿ.ವಿ.ಎಚ್.ಎಸ್.ಎಸ್.ಕಾರಡ್ಕ.
37
ಧನ್ಯಾ ವಿ.ರೈ.
ಜಿ.ಎಚ್.ಎಸ್.ಅಂಗಡಿಮೊಗರು.


Tuesday, 17 February 2015


17-02-2015
ಶಿಕ್ಷಕ ಹುದ್ದೆಯನ್ನು ಅಂಗೀಕರಿಸಿದ ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಅಭಿನಂದನೆಗಳು - ಅಧ್ಯಾಪಕ ಸಂಘ.
ಕನ್ನಡ ಶಾಲೆಗಳ ಮೇಲಿನ ಕಾಳಜಿಯಿಂದ ಕನ್ನಡ ವಿದ್ಯಾರ್ಥಿ, ಶಿಕ್ಷಕ ಮತ್ತು ಅಧಿಕೃತರಿಗೆ ತೊಡಕಾಗಿ ಕಾಡುತ್ತಿದ್ದ ತೆರವುಗೊಂಡ ಶಿಕ್ಷಕ ಹುದ್ದೆಯ ನೇಮಕಾತಿಗೆ ಅಂಗೀಕಾರ ನೀಡಿದ ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಗಳು ನಿಜಕ್ಕೂ ಅಭಿನಂದಾರ್ಹರು. ಇದೇ ರೀತಿ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದ ಎಲ್ಲಾ ಹುದ್ದೆಗಳನ್ನು ಆದಷ್ಟು ಬೇಗ ಅಂಗೀಕರಿಸಬೇಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷರಾದದ ಟಿ.ಡಿ.ಸದಾಶಿವ ರಾವ್ ನುಡಿದರು. ಅವರು ನಗರದ ಬೀರಂತಬೈಲಿನ ಅಧ್ಯಾಪಕ ಭವನದಲ್ಲಿ ಜರಗಿದ ಕೇಂದ್ರ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಾರ್ಚ್ 8ನೇ ತಾರೀಕಿನಂದು ನಗರದ ಮುನ್ಸಿಪಲ್ ಕಾನ್ಫೆರನ್ಸ್ ಹಾಲಿನಲ್ಲಿ ನಡೆಯುವ ಕನ್ನಡ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಸಮಾರಂಭದ ಯಶಸ್ಸಿಗೆ ಎಲ್ಲಾ ಶಿಕ್ಷಕರು ಸಹಕರಿಸಬೇಕೆಂದು ಕರೆ ನೀಡಲಾಯಿತು.ಪ್ರಸ್ತುತ ಕಾರ್ಯಕ್ರಮದಲ್ಲಿ ಮಂಜೇಶ್ವರ, ಕಾಸರಗೋಡು ಉಭಯ ಶಾಸಕರು, ಡಿ.ಪಿ.ಐ. ಎಡನೀರು ಗೋಪಾಲಕೃಷ್ಣ ಭಟ್ ಸಹಿತ ಉನ್ನತ ಶಿಕ್ಷಣಾಧಿಕಾರಿಗಳು ಮತ್ತು ನಾಡಿನ ಗಣ್ಯರು ಭಾಗವಹಿಸಲಿದ್ದಾರೆ. ಸಂಘಟನೆಯ ಬಲವರ್ಧನೆಯ ಕುರಿತು ರೂಪುರೇಷೆ ತಯಾರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ಉಪಾಧ್ಯಕ್ಷರುಗಳಾದ ಕೆ.ವಿ.ಸತ್ಯನಾರಾಯಣ ರಾವ್ ಮತ್ತು ಮಹಾಲಿಂಗೇಶ್ವರ ಭಟ್ ಎ೦.ವಿ., ಪದ್ಮಾವತಿ ಎ೦,ಕೃಷ್ಣೋಜಿ ರಾವ್, ಅಬ್ದುಲ್ ರಹಿಮಾನ್ ಯನ್, ಅಶೋಕ್ ಕೊಡ್ಲಮೊಗರು, ಪುರುಷೋತ್ತಮ ಕುಲಾಲ್, ಪ್ರದೀಪ್ ಕುಮಾರ್ ಶೆಟ್ಟಿ, ಕೆ.ಸತ್ಯನಾರಾಯಮ ಭಟ್, ಪ್ರೀತಂ ಎ.ಕೆ ಮತ್ತು ವಿಶಾಲಾಕ್ಷ ಪುತ್ರಕಳ ಮಾತನಾಡಿದರು.ಇತ್ತೀಚೆಗೆ ಹತ್ತನೇ ತರಗತಿ ಮಾದರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ತಯಾರಿಯಲ್ಲಿ ತೋರಿದ ಅಸಡ್ಡೆಮತ್ತು ಸರಕಾರಿ ಆದೇಶವನ್ನು ಪಾಲಿಸದ ಅಧಿಕಾರಿಗಳ ನಿಲುವಿನ ಕುರಿತು ಸರಕಾರಕ್ಕೆ ದೂರು ಸಲ್ಲಿಸಲು ನಿಯೋಗವನ್ನು ರಚಿಸಲಾಯಿತು.ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಜತೆ ಕಾರ್ಯದರ್ಶಿ ಪ್ರಭಾವತಿ ಪುಂಡೂರು ವಂದಿಸಿದರು.

Tuesday, 3 February 2015

03-02-2015
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ 
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಡೆಸಲುದ್ದೇಶಿಸಿದ ಕನ್ನಡ ಮಾಧ್ಯಮ ಪ್ರಶಸ್ತಿಯು ಕೇರಳ ರಾಜ್ಯದ ಕನ್ನಡ ವಿದ್ಯಾರ್ಥಿಗಳಿಗೆ ಪ್ರಾತಿನಿಧಿಕ ಪ್ರೋತ್ಸಾಹವಾಗಿದೆ .ಆದುದರಿಂದ ಇದಕ್ಕೆ ಅರ್ಹರಾದ ಎಲ್ಲಾ ಮಕ್ಕಳು, ಅವರ ಪೋಷಕರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎ೦ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಲ್. ಹನುಮಂತಯ್ಯನವರು ಕರೆ ನೀಡಿದ್ದಾರೆ.. ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗಳಿಸಿದ ಮಕ್ಕಳು ಇದಕ್ಕೆ ಅರ್ಹರಾಗಿರುತ್ತಾರೆ.ಇದಲ್ಲದೆ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯನ್ನತ ಗ್ರೇಡ್ ಗಳಿಸಿದ ಮಕ್ಕಳನ್ನು ಪುರಸ್ಕರಿಸಲಾಗುವುದು. ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಈ ಕಾರ್ಯಕ್ರಮವು ಕಾಸರಗೋಡಿನ ಮುನ್ಸಿಪಲ್ ಕಾನ್ಫೆರನ್ಸ್ ಹಾಲಿನಲ್ಲಿ ನಡೆಯಲಿದೆ . ಸ್ಥಳೀಯ ಶಾಸಕರು, ಡಿ.ಪಿ.ಐ.ಸಹಿತ ಉನ್ನತ ಶೈಕ್ಷಣಿಕ ಅಧಿಕಾರಿಗಳು, ಶಿಕ್ಷಣ ತಜ್ಞರು ಮತ್ತು ನಾಡಿನ ಗಣ್ಯರು ಭಾಗವಹಿಸಲಿದ್ದಾರೆ.

 

Monday, 19 January 2015

ಕುಂಬಳೆಯಲ್ಲಿ ನಡೆದ ಧರಣಿ ಸತ್ಯಾಗ್ರಹದ ಅಂಗವಾಗಿ ನಡೆದ ಮೆರವಣಿಗೆ





ಕಾಸರಗೋಡು

Sunday, 28 December 2014

28-12-2014
ಕನ್ನಡ ಅಧ್ಯಾಪಕ ಸಂಘದ ಕ್ಯಾಲೆಂಡರ್ ಬಿಡುಗಡೆ

ಜನವರಿ 17ರಂದು ಕನ್ನಡ ಅಧ್ಯಾಪಕ ಸಂಘದ ವತಿಯಿಂದ
ಧರಣಿ ಮುಷ್ಕರ.
ಕಾಸರಗೋಡು ಜಿಲ್ಲೆಯ ಕನ್ನಡ ಶಾಲೆಗಳಿಗೆ ಸಂವಿಧಾನ ಬದ್ಧವಾಗಿ ನೀಡಬೇಕಾದ ಅನೇಕ ಸೌಲಭ್ಯಗಳನ್ನು ನೀಡಲು ಹಿಂದೇಟು ಹಾಕುತ್ತಿರುವ ಅಧಿಕೃತರ ಮಲತಾಯಿ ಧೋರಣೆಯ ವಿರುದ್ಧ ನ್ಯಾಯಯುತ ಹೋರಾಟ ಮಾಡಬೇಕಾಗಿದೆ. ಆದುದರಿಂದ 17-01-2015 ನೇ ತಾರೀಕು ಶನಿವಾರದಂದು ಕಾಸರಗೋಡು ಜಿಲ್ಲೆಯ ನಾಲ್ಕು ಉಪಜಿಲ್ಲಾ ಕಛೇರಿಗಳ ಎದುರು ಧರಣಿ ಮುಷ್ಕರವನ್ನು ನಡೆಸಲು ತೀರ್ಮಾನಿಸಲಾಗಿದೆ. ಎಲ್ಲಾ ಶಿಕ್ಷಕ ಬಂಧುಗಳು ಈ ಮುಷ್ಕರವನ್ನು ಯಶಸ್ವಿಗೊಳಿಸಬೇಕಾಗಿದೆ. ಹೊಸದುರ್ಗದಲ್ಲಿ ಕನ್ನಡ ಶಿಕ್ಷಕ ಹುದ್ದೆಯನ್ನು ತೊಡೆದು ಹಾಕಿದುದರ ವಿರುದ್ಧ ನಡೆಯುವ ಎಲ್ಲಾ ಹೋರಾಟಗಳಿಗೂ ಅಧ್ಯಾಪಕ ಸಂಘ ತನ್ನ ಬೆಂಬಲ ವ್ಯಕ್ತಪಡಿಸಿದೆ. ಎ೦ದು ಕೇಂದ್ರಾಧ್ಯಕ್ಷ ಟಿ.ಡಿ.ಸದಾಶಿವ ರಾವ್ ನುಡಿದರು.ಬೀರಂತಬೈಲಿನಲ್ಲಿ ನಡೆದ ಕೇಂದ್ರ ಸಭೆಯಲ್ಲಿ ಕನ್ನಡ ಅಧ್ಯಾಪಕ ಸಂಘದ ಕ್ಯಾಲೆಂಡರನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ಪ್ರಸ್ತಾವನೆ ನುಡಿದರು. ಕೆ.ವಿ.ಸತ್ಯನಾರಾಯಣ ರಾವ್, ವಿಶಾಲಾಕ್ಷ ಪುತ್ರಕಳ, ಪ್ರಭಾವತಿ ಕೆದಿಲ್ಲಾಯ ಪುಂಡೂರು, ರಾಜೇಶ್ವರ ಸಿ.ಎಚ್, ಪುಷ್ಪ ಕುಮಾರಿ, ಶ್ರೀನಿವಾಸ ರಾವ್, ಪ್ರೀತಂ ಎ.ಕೆ, ಪ್ರದೀಪ್ ಕುಮಾರ್, ಕಷ್ಣೋಜಿ ರಾವ್ ಎ, ಅಶೋಕ್ ಕೊಡ್ಲಮೊಗರು, ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸೂಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಪದ್ಮಾವತಿ ಎ೦ ವಂದಿಸಿದರು.


Saturday, 27 December 2014


-->
27-12-2014
ಜನವರಿ 17ರಂದು ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕ ಸಂಘದ ವತಿಯಿಂದ
ಧರಣಿ ಮುಷ್ಕರ.
ದಿನಾಂಕಃ 17-01-2015 ನೇ ತಾರೀಕು ಶನಿವಾರ
ಸ್ಥಳಃಕಾಸರಗೋಡು ಜಿಲ್ಲೆಯ ನಾಲ್ಕು ಉಪಜಿಲ್ಲಾಶಿಕ್ಷಣಾಧಿಕಾರಿಗಳ ಕಛೇರಿಗಳ ಎದುರು

ಪ್ರಧಾನ ಬೇಡಿಕೆಗಳು.
* ಅಂಗನವಾಡಿಗಳಲ್ಲಿ ಕನ್ನಡದ ಅವಗಣನೆ ನಿಲ್ಲಿಸಬೇಕು.
* ಸರಕಾರದಿಂದ ವಿತರಿಸಲಾಗುವ ರಶೀದಿ, ಅರ್ಜಿ ನಮೂನೆ,ಮತ್ತು     ಮಾಹಿತಿ ಪತ್ರಗಳನ್ನು ಕನ್ನಡದಲ್ಲಿ ನೀಡಬೇಕು.
    * ಜಿ.ಎಚ್.ಎಸ್.ಎಸ್. ಹೊಸದುರ್ಗದಲ್ಲಿ ಸರಕಾರಿ ಆದೇಶದನ್ವಯ ನೆಲೆನಿಂತಿದ್ದ ಶಿಕ್ಷಕ ಹುದ್ದೆಯನ್ನು * ವಿನಾಕಾರಣ ತೊಡೆದುಹಾಕಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
    * ಕನ್ನಡ ಶಿಕ್ಷಕರಿಗೆ ವಿತರಿಸಬೇಕಾದಪಠ್ಯ ಪುಸ್ತಕ ಕೈಪಿಡಿಗಳನ್ನು ಕೂಡಲೇ ಒದಗಿಸಿರಿ.
    * ಇನ್ನೂ ಭಾಷಾಂತರಗೊಳ್ಳದ ಕೈಪಿಡಿಗಳ ಭಾಷಾಂತರವಾಗಲಿ
* ಕನ್ನಡ ಮಾಧ್ಯಮ ಮಕ್ಕಳಿಗೆ ಕಲಿಸಲು ಭಾಷೆತಿಳಿಯದ ಶಿಕ್ಷಕರ        ನೇಮಕಾತಿ ಸಲ್ಲದು.
*ಎಲ್ಲಾ ಕನ್ನಡ ಶಿಕ್ಷಕರಿಗೂ ಬ್ಲೆ೦ಡ್ ತರಬೇತಿ ನೀಡಿ.
* ಎಲ್ಲಾ ಬಿ.ಆರ್.ಸಿ.ಗಳಲ್ಲಿ ಸಾಕಷ್ಟು ಕನ್ನಡ ತರಬೇತುದಾರರನ್ನು ನೇಮಿಸಿರಿ.
* ಆರ್.ಎ೦.ಎಸ್.ಎ.ಶಾಲೆಗಳಿಗೆ ಸೌಕರ್ಯ ಕಲ್ಪಿಸಿರಿ.

ಭಾಗವಹಿಸಿರಿ ಯಶಸ್ವಿಗೊಳಿಸಿರಿ



Saturday, 20 December 2014


20-12-2014
ಮಕ್ಕಳ ಸಾಹಿತ್ಯ ಸಂಗಮ ಕಾಸರಗೋಡು ಗಡಿನಾಡ ಘಟಕ
ಸೂರಂಬೈಲು ಶಾಲೆಯಲ್ಲಿ ಕವಿಕಾವ್ಯ ಸಂವಾದ





ಸೂರಂಬೈಲು, ಸಾಹಿತ್ಯಾಸಕ್ತಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳುವ ಪ್ರಬಲ ಮಾಧ್ಯಮವಾಗಿದೆ. ಎಳೆವೆಯಲ್ಲಿಯೇ ಒಳ್ಳೊಳ್ಳೆಯ ಸಾಹಿತ್ಯಗಳನ್ನು ಓದುವುದು, ವಿಮರ್ಶಿಸುವುದರಿಂದ ನಮ್ಮ ಚಿಂತನಾ ಸಾಮರ್ಥ್ಯ ಹೆಚ್ಚುವುದು. ಉತ್ತಮ ಓದುವಿಕೆಯಿಂದ ಸಮಾಜ ಮೆಚ್ಚುವಂತೆ ವ್ಯವಹರಿಸುವ ಗುಣವೂ ಮೈಗೂಡುತ್ತದೆ. ಜತೆಗೆ ಸಾಹಿತ್ಯ ರಚನೆಗೆ ಪ್ರೇರಣೆಯೂ ದೊರೆಯುತ್ತದೆ. ಆದುದರಿಂದ ಮಕ್ಕಳಿಗೆ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಾಗಾರಗಳು ಹೆಚ್ಚು ಹೆಚ್ಚು ಸಿಗುವಂತಾಗಲಿ, ಎ೦ದು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿಯವರು ನುಡಿದರು. ಅವರು ಸೂರಂಬೈಲು ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಸಂಗಮದ ಕಾಸರಗೋಡು ಘಟಕದ ವತಿಯಿಂದ ಜರಗಿದ ಕವಿಕಾವ್ಯ ಸಂವಾದದ ಉದ್ಘಾಟನೆಗೈದು ಮಾತನಾಡಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ವಾಣಿ ಪಿ.ಎಸ್. ವಹಿಸಿದ್ದರು.ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ಘಟಕದ ಅಧ್ಯಕ್ಷರಾದ ಎಸ್.ವಿ.ಭಟ್, ಮಹಾಜನ ಸಂಸ್ಕೃತ ವಿದ್ಯಾಸಂಸ್ಥೆಗಳ ಪ್ರಬಂಧಕರಾದ ಜಯದೇವ ಖಂಡಿಗೆ, ಸೂರಂಬೈಲು ಶಾಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ವಿ.ಸತ್ಯನಾರಾಯಣ ರಾವ್,ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಪೆರ್ಣೆ,ಮಕ್ಕಳ ಸಾಹಿತ್ಯಸಂಗಮ ಕೇಂದ್ರ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಕೆ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸರಾವ್ ಮತ್ತು ಸಾವಿತ್ರಿ ಎಸ್.ರಾವ್ ಉಪಸ್ಥಿತರಿದ್ದರು.ಹಿರಿಯ ಶಿಕ್ಷಣ ತಜ್ಞರಾದ ವಿ.ಬಿ.ಕುಳಮರ್ವ ಪ್ರಸ್ತಾವನಾ ಭಾಷಣ ಮಾಡಿದರು.ಕಾರ್ಯದರ್ಶಿಗಳಾದ ಬಾಲ ಮಧುರಕಾನನ ಸ್ವಾಗತಿಸಿ, ಪ್ರಭಾವತಿ ಕೆದಿಲ್ಲಾಯ ಪುಂಡೂರು ವಂದಿಸಿದರು. ಕುಮಾರಿ ಚೈತ್ರಾ ಎಸ್ ನಿರೂಪಣೆಗೈದಳು.
ಉದ್ಘಾಟನೆಯ ಬಳಿಕ ಹಿರಿಯ ಸಾಹಿತಿ ವಿ.ಬಿ. ಅರ್ತಿಕಜೆಯವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಸಂವಾದದಲ್ಲಿ ಮಕ್ಕಳಿಂದ ಮೂಡಿಬಂದ ಕೆಲವು ಪ್ರಧಾನ ಪ್ರಶ್ನೆಗಳು ಇಂತಿದ್ದವು.
*ಬಾಲ್ಯದಲ್ಲಿ ನಿಮಗೆ ಸಾಹಿತ್ಯಾಭಿರುಚಿ ಉಂಟಾದ ಬಗೆ ಹೇಗೆ?
    * ಸಾಹಿತ್ಯ ರಚನೆಗೆ ಸ್ಪೂರ್ತಿ ಯಾರು?
    * ನಿಮ್ಮ ಸಾಹಿತ್ಯವು ಮೊದಲಿಗೆ ಪ್ರಕಟವಾದಾಗ ನಿಮಗಾದ ಅನುಭವವೇನು ?
    *ವೃತ್ತಿಜೀವನಕ್ಕೆ ಸೇರಿದಾಗ ನಿಮ್ಮ ಸಾಹಿತ್ಯದ ಒಲವನ್ನು ಉಳಿಸಿಕೊಂಡದ್ದು ಹೇಗೆ?
    * ವೃತ್ತಿ ಜೀವನದಲ್ಲಿ ಸಾಹಿತ್ಯ ಪ್ರೇರಣೆಗೆ ಸಂಬಂಧಿಸಿದ ಘಟನೆಗಳು ಏನಾದರೂ ಇದೆಯೇ?
    * ನೀವು ಆದರ್ಶಪ್ರಾಯರೆಂದು ಗುರುತಿಸುವ ವ್ಯಕ್ತಿಗಳು ಯಾರಾದರೂ ಇದ್ದಾರೆಯೇ?
* ನಿಮ್ಮ ಸಾಹಿತ್ಯ ಒಡನಾಡಿಗಳು ಯಾರುಯಾರು?
*ಪುಸ್ತಕ ಪ್ರಕಟನೆಯ ವಿಶೇಷ ಅನುಭವಗಳು ಏನಾದರೂ ಇದೆಯೇ?
* ಸಾಹಿತ್ಯ ಪ್ರಚಾರಕ್ಕಾಗಿ ನೀವು ಮಾಡಿದ ಕಾರ್ಯಗಳು ಏನು?
* ನಿವೃತ್ತಿಯ ನಂತರ ನಿಮ್ಮ ಸಾಹಿತ್ಯ ರಚನೆ ಹೇಗಿದೆ?
*ನೀವು ಪ್ರಕಟಿಸಿದ ಸಾಹಿತ್ಯ ಪ್ರಕಾರಗಳು ಯಾವುವು?
*ಅಪ್ರಕಟಿತ ಕೃತಿಗಳು ಯಾವುದಾದರೂ ಇದೆಯೇ?
*ಅಂಕಣ ಬರಹಗಳನ್ನು ಯಾವ ಯಾವ ಪತ್ರಿಕೆಗಳಿಗೆ ಬರೆಯುತ್ತೀರಿ?
*ಸಾಹಿತ್ಯ ಸೇವೆಯ ಮುಂದಿನ ಯೋಜನೆಗಳೇನು?
*ವಿದ್ಯಾರ್ಥಿಗಳಿಗೆ ನೀವು ನೀಡುವ ಸಂದೇಶ ಮತ್ತು ಮಾರ್ಗದರ್ಶನವೇನು?
ಸುಮಾರು ಎರಡು ಗಂಟೆಗಳ ಕಾಲ ನಡೆದ ಸಂವಾದದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಸಾಹಿತಿಗಳು ತುಂಬಾ ತಾಳ್ಮೆಯಿಂದಲೆ ಉತ್ತರಿಸಿದರು.

ಅಪರಾಹ್ನ ಡಾ/ ರಮಾನಂದ ಬನಾರಿಯವರೊಂದಿಗೆ ಸಾಹಿತ್ಯ, ಯಕ್ಷಗಾನ ಕಲೆಯ ಕುರಿತು ಮಕ್ಕಳು ಪ್ರಶ್ನೆ ಕೇಳಿದರು.
ಬನಾರಿಯವರು ಸಮರ್ಪಕವಾಗಿ ಉತ್ತರಿಸಿದರು. ಕಾರ್ಯಕ್ರಮದ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯ ರಸಪ್ರಶ್ನೆ ಜರಗಿತು. ಬನಾರಿಯವರ ಆಯ್ದ ಕವನಗಳನ್ನು ಮಹಾಜನ ಸಂಸ್ಕೃತ ವಿದ್ಯಾಲಯದ ಮಕ್ಕಳು ಮತ್ತು ಅರ್ತಿಕಜೆಯವರ ರಾಮಾಯಣದ ಕೆಲವು ಹಾಡುಗಳನ್ನು ಅನುಷಾ ಎಸ್.ಮಯ್ಯ ಹಾಡಿದರು. ಭಾಗವಹಿಸಿದ ಮಕ್ಕಳಿಗೆ ಪ್ರಶಂಸಾಪತ್ರ, ಬನಾರಿಯವರ ಕೊಳಲು ಪುಸ್ತಕ ಮತ್ತು ಶಾಲೆಗಳಿಗೆ ಸ್ಮರಣಿಕೆ ನೀಡಲಾಯಿತು. ತೊಂಭತ್ತೆಂಟು ಸಾಹಿತ್ಯಾಸಕ್ತ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಹರೀಶ್ ಪೆರ್ಲ, ಕೃಷ್ಣೋಜಿ ರಾವ್, ಪಾರ್ವತಿ ಕೆ, ಮೊದಲಾದವರು ಉಪಸ್ಥಿತರಿದ್ದರು.